ಕರ್ನಾಟಕ

ತಲೆಯಲ್ಲಿ 10ಕ್ಕೂ ಹೆಚ್ಚು ಕಾಯಿಗಳನ್ನು ಒಡೆದ ದೇವಸ್ಥಾನದ ಪೂಜಾರಿ

Pinterest LinkedIn Tumblr


ಬಾಗಲಕೋಟ: ನಗರದಲ್ಲಿ ಮಂಗಳವಾರ ನಡೆದ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ಪೂಜಾರಿ (ಅರ್ಚಕ) ತಲೆಗೆ ತೆಂಗಿನಕಾಯಿ ಒಡೆದು ಭಕ್ತಿ ಮೆರೆದರು.

ನೂರಾರು ವರ್ಷಗಳ ಇತಿಹಾಸದ ಜಾತ್ರೆಯಲ್ಲಿ ಪೂಜಾರಿ ತಲೆಗೆ ತೆಂಗಿನಕಾಯಿ ಒಡೆಯುವ ದೃಶ್ಯ ನೋಡಲು ಜನ ನೆರೆದಿರುತ್ತಾರೆ.

ಕಾಯಿಗಳನ್ನು ಮೇಲಕ್ಕೆ ತೂರಿದ ಪೂಜಾರಿ ಮಾನಪ್ಪ ಚವ್ಹಾಣ ಅವುಗಳು ಕೆಳಗೆ ಬೀಳುತ್ತಿದ್ದಂತೆಯೇ ತಲೆಯೊಡ್ಡಿ ಕಾಯಿಗಳನ್ನು ಒಡೆದರು. 10 ಕ್ಕೂ ಹೆಚ್ಚು ಕಾಯಿಗಳನ್ನು ಅವರು ಒಡೆದರು. ದೇವಸ್ಥಾನದ ಪೂಜಾರಿ ತಲೆಯಿಂದ ತೆಂಗಿನಕಾಯಿ ಒಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.

Comments are closed.