ಕರಾವಳಿ

ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ ಅಡ್ಡೆಗಳಿಗೆ ಕಡಿವಾಣ ಹಾಕದಿದ್ದರೆ ಪಬ್ ದಾಳಿ ಪ್ರಕರಣ ಮರುಕಳಿಸಬಹುದು : ಬಜರಂಗದಳ,ವಿ‌ಎಚ್‌ಪಿ ಎಚ್ಚರಿಕೆ

Pinterest LinkedIn Tumblr

ಮಂಗಳೂರು, ಜೂನ್.19: ಮಂಗಳೂರಿನ ಹಲವೆಡೆಗಳಲ್ಲಿ ರಾಜರೋಷವಾಗಿ ಕಾರ್ಯಾಚರಿಸುತ್ತಿರುವ ಇಸ್ಪಿಟ್ ಕ್ಲಬ್, ಸ್ಕಿಲ್ ಗೇಮ್, ವೀಡಿಯೋ ಗೇಮ್, ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಡ್ಯಾನ್ಸ್ ಪಬ್, ಮಸಾಜ್ ಸೆಂಟರ್‌ಗಳ ವಿರುದ್ಧ ಬಜರಂಗದಳ ಹಾಗೂ ವಿಶ್ವ ಹಿಂದ್ ಪರಿಷತ್ ಮತ್ತೊಮ್ಮೆ ಸಮರ ಸಾರಿದೆ.

ಮಂಗಳವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಮಹಿಳಾ ಪ್ರಮುಖ್ ಆಶಾ ಜಗದೀಶ್ ಅವರು, ನಗರದ ಪ್ರಮುಖ ಸ್ಥಳಗಳಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಇಸ್ಪಿಟ್ ಕ್ಲಬ್, ಸ್ಕಿಲ್ ಗೇಮ್, ವೀಡಿಯೋ ಗೇಮ್, ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಪಬ್, ಮಸಾಜ್ ಸೆಂಟರ್‌ಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕದಿದ್ದರೆ ಈ ಹಿಂದೆ ಪಬ್ ಮೇಲೆ ನಡೆದ ದಾಳಿ ಪ್ರಕ್ರಿಯೆಗಳು ಮರುಕಳಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಯಾವೂದೇ ರೀತಿಯ ಸಂಗೀತಕ್ಕೆ ನಮ್ಮ ವಿರೋಧಿವಿಲ್ಲ. ಆದರೆ ಸಂಗೀತಾ, ಡ್ಯಾನ್ಸ್ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ನಮ್ಮ ವಿರೋಧವಿದೆ. ಜೊತೆಗೆ ಇಸ್ಪಿಟ್ ಕ್ಲಬ್, ಸ್ಕಿಲ್ ಗೇಮ್, ವೀಡಿಯೋ ಗೇಮ್ ಗಳಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಇಸ್ಪಿಟ್ ಕ್ಲಬ್, ಸ್ಕಿಲ್ ಗೇಮ್, ವೀಡಿಯೋ ಗೇಮ್, ಡ್ಯಾನ್ಸ್ ಪಬ್, ಮಸಾಜ್ ಸೆಂಟರ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಹೇಳಿದರು.

ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅವರು ಮಾತನಾಡಿ, ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ, ಲಾಲ್‌ಭಾಗ್ ಸರ್ಕಲ್, ಬಳ್ಳಾಲ್ ಭಾಗ್ ಸರ್ಕಲ್, ಎಮ್.ಜಿ.ರಸ್ತೆ, ಜ್ಯೋತಿ ಸರ್ಕಲ್, ಹಂಪನ್ ಕಟ್ಟೆ, ಕಂಕನಾಡಿ, ಜೆಪ್ಪು, ಬೆಂದೂರ್‌ವೆಲ್, ಬಲ್ಮಠ ರಸ್ತೆ ಸೇರಿದಂತೆ ಮತ್ತಿತ್ತರ ಮತ್ತಿತರ ಕಡೆಗಳಲ್ಲಿ ಲೇಡಿಸ್ ಬಾರ್, ಲೈವ್‌ಬ್ಯಾಂಡ್, ಪಬ್, ಇಸ್ಪಿಟ್ ಕ್ಲಬ್, ಸ್ಕಿಲ್ ಗೇಮ್, ವೀಡಿಯೋ ಗೇಮ್, ಮಸಾಜ್ ಸೆಂಟರ್‌ಗೆ ಅನುಮತಿ ನೀಡಲಾಗಿದೆ.

ಇದರಿಂದ ಅದೆಷ್ಟೋ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ. ಇಲ್ಲಿ ವೇಶ್ಯಾವಾಟಿಕೆ ನಡೆಯುವ ಸಾಧ್ಯತೆಯೂ ಇದೆ. ಕೆಲವು ಕಡೆಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ದೂರುಗಳೂ ಬಂದಿವೆ. ಮಾತ್ರವಲ್ಲದೇ ಇಂತಹ ಅಡ್ಡೆಗಳಿಂದ ಇಂದಿನ ಕಾಲೇಜು ಯುವತಿಯರೂ ಸೇರಿದಂತೆ ಯುವಕರೂ ಹಾದಿ ತಪ್ಪುವ ಅಪಾಯ ಹೆಚ್ಚಾಗಿದೆ.. ಹಾಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಈ ಎಲ್ಲಾ ಅಡ್ಡೆಗಳ ಅನುಮತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಶೇಣವ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ಜಿಲ್ಲಾ ಸಹ ಸಂಚಾಲಕ ಪ್ರದೀಪ್ ಪಂಪ್‌ವೆಲ್ ಉಪಸ್ಥಿತರಿದ್ದರು.

Comments are closed.