ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ಬೆಂಬಲ ಹಿಂಪಡೆಯಲು ಕಾರಣಗಳೇನು?

Pinterest LinkedIn Tumblr

ಹೊಸದಿಲ್ಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮೂರು ವರ್ಷಗಳ ಹಿಂದೆ ಅರಳಿದ್ದ ಕಮಲ ಮುದುಡಿದೆ.

ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆಯುವ ಮೂಲಕ ಜಮ್ಮು ಕಾಶ್ಮೀರದಲ್ಲಿ ಸಮ್ಮಿಶ್ರ ಸರಕಾರದ ಪತನಗೊಂಡಿದೆ.

ಬಿಜೆಪಿಯ ಈ ನಿರ್ಧಾರ ದಿಢೀರ್ ರಾಜಕೀಯ ಬೆಳವಣಿಗೆಗಳಿಗೆ ನಾಂದಿ ಹಾಡಿದೆ.

ಬಿಜೆಪಿಯ ಈ ನಿರ್ಧಾರ ದಿಢೀರ್‌ ಅಲ್ಲ, ಇದಕ್ಕೆ ಹಲವು ವರ್ಷಗಳ ಅಸಮಾಧಾನ, ಭಿನ್ನಮತ ಕೂಡ ಸೇರಿದೆ.

ಪಿಡಿಪಿಯ ವಿರುದ್ಧ ಬಿಜೆಪಿ ದೂರುಗಳ ಸರಮಾಲೆಯನ್ನೇ ನೀಡಿದೆ.

ಮೂಲ ತತ್ವಗಳಿಗೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಪಿಡಿಪಿ ತಿಳಿಸಿತ್ತು. ಈಗ ಮಾತು ತಪ್ಪಿದೆ ಎಂದು ಬಿಜೆಪಿ ಆಪಾದಿಸಿದೆ.

ಕಣಿವೆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರಕಾರ ಭಾರಿ ಪ್ರಯತ್ನ ನಡೆಸಿತ್ತು. ಶಾಂತಿ ಮಾತುಕತೆಗೂ ಮುಂದಾಗಿತ್ತು. ಅಲ್ಲದೇ ರಂಜಾನ್‌ ಸಂದರ್ಭದಲ್ಲಿ ಕದನ ವಿರಾಮ ಘೋಷಣೆ ಮಾಡಿತ್ತು. ಆದರೆ ಪಿಡಿಪಿ ಇದ್ಯಾವುದಕ್ಕೂ ಬೆಂಬಲ ನೀಡಲಿಲ್ಲ. ರಂಜಾನ್‌ ಸಂದರ್ಭದಲ್ಲಿಯೇ ಉಗ್ರರು ಅಟ್ಟಹಾಸ ಮೆರೆದರು ಎಂದು ಬಿಜೆಪಿ ದೂರಿದೆ.

ಬುರ್ಹಾನ್‌ವಾನಿ ಪ್ರಕರಣದಲ್ಲಿ ಪಿಡಿಪಿ ಪ್ರತ್ಯೇಕ ಧೋರಣೆ ತಳೆಯಿತು. ಅಲ್ಲದೇ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಯುವಕರಿಗೆ ಕ್ಷಮಾದಾನ ನೀಡಲು ಪಿಡಿಪಿ ಮುಂದಾಗಿತ್ತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಪ್ರತ್ಯೇಕತಾ ಧೋರಣೆಯನ್ನು ಹೆಚ್ಚಾಗಿ ಪಾಲಿಸದೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದಾರೆ.

ಎಲ್ಲದ್ದಕ್ಕೂ ಮುಖ್ಯವಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬದಿಗೊತ್ತಿದ್ದ ಪಿಡಿಪಿಯ ನಿರ್ಧಾರ ಸಮರ್ಥನೀಯವಲ್ಲ ಎಂದು ಬಿಜೆಪಿ ಬೆಂಬಲ ಹಿಂಪಡೆಯುವ ನಿರ್ಧಾರಕ್ಕೆ ಸಮರ್ಥನೆ ನೀಡಿದೆ.

Comments are closed.