ಕರ್ನಾಟಕ

24 ವರ್ಷದ ನಂತರ ಕಿಡ್ನಿ ಕಸಿ ಮಾಡಿದವೈದ್ಯರಿಗೆ ಧನ್ಯವಾದ!

Pinterest LinkedIn Tumblr


ಬೆಂಗಳೂರು: 24 ವರ್ಷಗಳ ಹಿಂದೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡುವುದರ ಮೂಲಕ ತನ್ನ ಪುನರ್ಜನ್ಮಕ್ಕೆ ಕಾರಣರಾದ ವೈದ್ಯರನ್ನು ಆಕೆ ಮರೆತಿರಲಿಲ್ಲ. ಇಷ್ಟು ವರ್ಷಗಳವರೆಗೆ ತಾನು ಬದುಕಿದ್ದೇನೆ ಎಂದರೆ ಅದಕ್ಕೆ ವೈದ್ಯರೇ ಕಾರಣ ಎಂದು ಅವರನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದಳು. ಮತ್ತೀಗ ಆ ವೈದ್ಯರನ್ನು ಕಂಡು ಧನ್ಯವಾದ ಹೇಳಲೆಂದಾಕೆ ದೂರದ ಮುಂಬೈನಿಂದ ಬೆಂಗಳೂರಿಗೆ ಓಡಿ ಬಂದಿದ್ದಾಳೆ.

ಆಕೆಯ ಹೆಸರು ರಂಜನಾ. 17 ವರ್ಷ ವಯಸ್ಸಿನಲ್ಲಿಆಕೆಗೆ ಮೂತ್ರಪಿಂಡ ವೈಫಲ್ಯವಾಗಿತ್ತು. 1994ರಲ್ಲಿ ಬೆಂಗಳೂರಿನ ‘ಲೇಕ್ ಸೈಡ್ ‘ ಆಸ್ಪತ್ರೆಯಲ್ಲಾಕೆಗೆ ಕಿಡ್ನಿ ಕಸಿ ಮಾಡಲಾಗಿತ್ತು. ಇಲ್ಲಿ ಅದೃಷ್ಟ ಕೂಡ ಆಕೆಯ ಕೈ ಹಿಡಿದಿತ್ತು. ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ ಕೆಲವು ತಿಂಗಳ ನಂತರ ಮಾನವ ಅಂಗ ಕಸಿ ಕಾಯ್ದೆ ಜಾರಿಗೊಳಿಸಲಾಯಿತು, ಇದು ಹಣಕ್ಕಾಗಿ ಅಂಗಗಳ ವಿನಿಮಯವನ್ನು ನಿಷೇಧಿಸಿತು.

ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂತ್ರಪಿಂಡ ಶಾಸ್ತ್ರಜ್ಞ ಡಾ. ಎಸ್ ಸುಂದರ್ ಅವರು ರಂಜನಾ ಅವರ ಶಸ್ತ್ರಚಿಕಿತ್ಸೆಯ ಜವಾಬ್ದಾರಿ ಹೊತ್ತಿದ್ದರು.

2 ಮಕ್ಕಳ ತಾಯಿಯಾಗಿರುವ ಆಕೆ ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾಳೆ. ತನ್ನ ಈ ಸಹಜ ಬದುಕಿಗೆ ಕಾರಣವಾಗಿರುವ ವೈದ್ಯರಿಗೆ ಧನ್ಯವಾದ ಹೇಳದೇ ದೀರ್ಘ ಕಾಲ ಸಂದು ಹೋಯಿತು ಎಂದಾಕೆಗೆ ಇತ್ತೀಚಿಗೆ ಕಾಡುತ್ತಲೇ ಇತ್ತು. ಹೀಗಾಗಿ ಅಂತರ್ಜಾಲದಲ್ಲಿ ವೈದ್ಯರ ವಿವರ ಹುಡುಕಾಡಿ ಕುಟುಂಬ ಸಮೇತ ಬೆಂಗಳೂರಿಗೆ ಓಡಿ ಬಂದಿದ್ದಾಳೆ.

Comments are closed.