ರಾಷ್ಟ್ರೀಯ

ಊಟ ಬೇಗ ಬಡಿಸು ಎಂದಿದ್ದಕ್ಕೆ ಒನಕೆಯಿಂದ ಹೊಡೆದು ಗಂಡನನ್ನು ಕೊಂದಳು

Pinterest LinkedIn Tumblr


ರಾಜ್ಕೋಟ್: ಊಟದ ವಿಷಯದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕೇಶೋದ್ ತಾಲೂಕಿನ ರಾನಿಂಗ್ಪುರ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತನನ್ನು ಜಗದೀಶ್ ಝಾಲಾ ( 45) ಎಂದು ಗುರುತಿಸಲಾಗಿದ್ದು, ಆತ ಪತ್ನಿ ಶಾಂತಾ ಝಾಲಾ(40)ಳಿಂದ ಕೊಲೆಯಾಗಿದ್ದಾನೆ.

ಕುಡಿತದ ಚಟವನ್ನಂಟಿಸಿಕೊಂಡಿದ್ದ ಜಗದೀಶ್ ಮತ್ತು ಆತನ ಪತ್ನಿ ನಡುವೆ ಸದಾ ಜಗಳವಾಗುತ್ತಿತ್ತು. ಸೋಮವಾರ ಮಧ್ಯಾಹ್ನ ಜಗದೀಶ್ ಬೇಗ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದಾನೆ. ಅಡುಗೆ ಮಾಡುತ್ತಿದ್ದ ಆಕೆ ಸ್ವಲ್ಪ ಸಮಯ ಕಾಯು ಎಂದು ಹೇಳಿದ್ದಾಳೆ. ಇದೇ ಕಾರಣಕ್ಕೆ ಜಗದೀಶ್ ಜಗಳವಾಡಲು ಆರಂಭಿಸಿದ್ದಾನೆ. ಕೋಪದ ಭರದಲ್ಲಿ ಕಬ್ಬಿಣದ ಒನಕೆಯನ್ನೆತ್ತಿದ್ದ ಪತ್ನಿ, ಪತಿಯನ್ನು ಮನಬಂದಂತೆ ಥಳಿಸಿದ್ದಾಳೆ.

ಶಾಂತಲಾ ಹೊಡೆತಕ್ಕೆ ಜಗದೀಶನ ತಲೆ ಒಡೆದಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ, ಎಂದು ಕೇಶೋಧ್ ಪೊಲೀಸ್ ಠಾಣೆ ಸಬ್- ಇನ್ಸಪೆಕ್ಟರ್ ಎಮ್ ಎ ವಾಲಾ ತಿಳಿಸಿದ್ದಾರೆ.

ದಂಪತಿ ಪುತ್ರ ಹಿರೇನ್ ಝಾಲಾ (19) ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.