
ನಟಿ ಸನ್ನಿ ಲಿಯೋನ್ ಪತಿ ಕಮ್ ಮ್ಯಾನೇಜರ್ ಡೇನಿಯಲ್ ವೆಬರ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ತನ್ನ ಕುಟುಂಬದ ಖಾಸಗಿ ಫೋಟೋ ಒಂದು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗಿದೆ. ತನ್ನ ದತ್ತುಪುತ್ರಿ ನಿಶಾ ಜತೆಗೆ ಅರೆನಗ್ನವಾಗಿರುವ ಫೋಟೋವನ್ನು ‘ವಿಶ್ವ ಅಪ್ಪಂದಿರ ದಿನಾಚರಣೆ’ ಪ್ರಯುಕ್ತ ಹಂಚಿಕೊಂಡಿದ್ದಾರೆ ಡೇನಿಯಲ್ ವೆಬರ್.
ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ತನ್ನ ದತ್ತು ಪುತ್ರಿ ಜತೆಗೆ ಅರನಗ್ನವಾಗಿ ಕಾಣಿಸಿಕೊಂಡಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿದ್ದು, ನೇಟಿಜನ್ಸ್ ಸನ್ನಿ ದಂಪತಿಗಳನ್ನು ಟ್ರೋಲ್ ಮೂಲಕ ಅಟ್ಯಾಕ್ ಮಾಡಿದ್ದಾರೆ. “Once a porn star, always a porn star”, “ಮಗುವಿನ ಜತೆಗೆ ಏನಿದು ಅಸಭ್ಯವಾಗಿ, ಡರ್ಟಿ ಫ್ಯಾಮಿಲಿ” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
“ಇದರಲ್ಲಿ ತಪ್ಪೇನು? ತಮ್ಮ ಮಗುವಿನ ಜತೆಗೆ ನಗ್ನವಾಗಿ ಪೋಸ್ ಕೊಟ್ಟಿರುವುದು ತಪ್ಪೇನು ಇಲ್ಲ. ತಮ್ಮ ಮಕ್ಕಳ ಜತೆಗೆ (ಬಟ್ಟೆ ಇರಲಿ ಬಿಡಲಿ) ಪೋಸ್ ಕೊಟ್ಟರೆ ಪೋರ್ನ್ ಸ್ಟಾರ್ ಆಗಲ್ಲ” ಎಂದು ಕೆಲವರು ಸನ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ. “ಸನ್ನಿ ಲಿಯೋನ್ ತನ್ನ ಮಗಳನ್ನೂ ಪೋರ್ನ್ ಸ್ಟಾರ್ ಮಾಡಲು ಹೊರಟಿದ್ದಾರೆ” ಎಂದಿದ್ದಾರೆ ಕೆಲವರು.
ಸನ್ನಿ ಲಿಯೋನ್
“ನಿಶಾ ಮುಂದೆ ಏನೇ ಆಗಲಿ, ಅವಳ ಬದುಕನ್ನು ರೂಪಿಸಲು ಸನ್ನಿ ಪೋಷಕ ಪಾತ್ರ ಪೋಷಿಸುತ್ತಿದ್ದಾರೆ.” “ಪೋರ್ನ್ ಸಿನಿಮಾ ಮಾಡಿ, ಆದರೆ ಮಕ್ಕಳನ್ನು ದೂರವಿಡಿ” ಎಂಬ ಕಾಮೆಂಟ್ಗಳು ಹರಿದು ಬಂದಿವೆ. ಒಟ್ಟಾರೆ ಸನ್ನಿಲಿಯೋನ್ರ ಈ “ಅನುಚಿತ” ಫೋಟೋ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
Comments are closed.