ರಾಷ್ಟ್ರೀಯ

ಐವರಿಂದ ತರುಣನ ಅತ್ಯಾಚಾರ: ಗುದದ್ವಾರಕ್ಕೆ ರಾಡ್‌ ಇರಿದ ಕಾಮಾಂಧರು

Pinterest LinkedIn Tumblr


ಗಾಜಿಯಾಬಾದ್‌: ಐವರು ವಿಕೃತ ಕಾಮುಕರು 17 ವರ್ಷದ ತರುಣನೊಬ್ಬನನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಗುದದ್ವಾರಕ್ಕೆ ಕಬ್ಬಿಣದ ರಾಡ್‌ ಇರಿದ ಹೇಯ ಘಟನೆ ನಡೆದಿದೆ.

ಮೋದಿ ನಗರ್‌ ಎಂಬಲ್ಲಿ ಕಳೆದ ಗುರುವಾರ ಘಟನೆ ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ.

17 ರ ವಿದ್ಯಾರ್ಥಿ ಗ್ಯಾರೇಜ್‌ಗೆ ಬೈಕ್‌ ರಿಪೇರಿಗೆಂದು ತೆರಳಿದ್ದ ವೇಳೆ ಬೈಕ್‌ ಅಡ್ಡಗಟ್ಟಿದ ಐವರು ಬಾಲಕನ ಮೇಲೆ ವಿಕೃತಿ ಮೆರೆದು ಗುದದ್ವಾರಕ್ಕೆ ಕಬ್ಬಿಣದ ರಾಡ್‌ ತುರುಕಿದ್ದಾರೆ. ಇಡೀ ಘಟನೆಯನ್ನು ವಿಡಿಯೋ ಚಿತ್ರೀಕರಿಸಿದ್ದಾರೆ.

ಘಟನೆಯ ಬಳಿಕ ತರುಣನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್‌ಗಳು ಮತ್ತು ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಓರ್ವ ಹೆಡ್‌ಕಾನ್ಸ್‌ಟೇಬಲ್‌ ಪುತ್ರ ಎಂದು ಎಸ್‌ಪಿ ತಿಳಿಸಿದ್ದಾರೆ.

Comments are closed.