
ನವದೆಹಲಿ: ದೇಶಾದ್ಯಂತ ಮೊಬೈಲ್ ಡೇಟಾ ಬಳಕೆದಾರರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಕಳೆದ 3 ವರ್ಷಗಳಲ್ಲಿ ಸರಾಸರಿ ಮೊಬೈಲ್ ಡೇಟಾ ಬಳಕೆ ಪ್ರಮಾಣ 15 ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ 4ಜಿ ಮೊಬೈಲ್ ಇಂಟರ್ನೆಟ್ ದರ ಗಣನೀಯವಾಗಿ ಕಡಿಮೆಯಾಗುತ್ತಿದೆ, ಜತೆಗೆ ಇಂಟರ್ನೆಟ್ ವೇಗದಲ್ಲಿ ಹೆಚ್ಚಳ ಕಂಡಿದೆ. ಹಿನ್ನೆಲೆಯಲ್ಲಿ 2014ರ ಅಂತ್ಯದಿಂದ 2017ರ ಅಂತ್ಯದವರೆಗೆ ಮೊಬೈಲ್ ಡೇಟಾ ಬಳಕೆ ಪ್ರಮಾಣ ಸರಾಸರಿ 0.26 ಜಿಬಿಯಿಂದ 4 ಜಿ.ಬಿಗೆ ಏರಿಕೆಯಾಗಿದೆ ಎಂದು ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.
ಇಂಟರ್ನೆಟ್ ಬಳಕೆ ಮಾಡುವವರ ಪೈಕಿ ಶೇ. 89 ರಷ್ಟು ಭಾರತೀಯರು ಮೊಬೈಲ್ ಮತ್ತು ಟ್ಯಾಬ್ಗಳನ್ನು ಬಳಸಿ ಇಂಟರ್ನೆಟ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಸ್ಮಾರ್ಟ್ಫೋನ್ ಬಳಕೆದಾರರು ಹೆಚ್ಚಾಗಿ ವಿಡಿಯೋಗಳನ್ನು ನೋಡುತ್ತಿದ್ದಾರೆ. ಜತೆಗೆ 4 ಜಿ ಡೇಟಾ ಪ್ಯಾಕ್ನ ಬೆಲೆ 2014ರ ಸುಮಾರಿಗೆ ಪ್ರತೀ ಜಿಬಿಗೆ 269 ರೂ. ಇತ್ತು, ಆದರೆ ಈಗ ಗ್ರಾಹಕರು ಪ್ರತೀ ಜಿಬಿಗೆ 19 ರೂ. ಪಾವತಿಸುತ್ತಿದ್ದಾರೆ ಎಂದು ಟ್ರಾಯ್ ತಿಳಿಸಿದೆ.
2016ರ ಸೆಪ್ಟೆಂಬರ್ನಲ್ಲಿ ರಿಲಯನ್ಸ್ ಜಿಯೋ 4ಜಿ ಮೊಬೈಲ್ ಡೇಟಾ ವನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವ ಮೂಲಕ ಮೊಬೈಲ್ ಡೇಟಾ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು. ಆ ನಂತರ ಇತರ ಮೊಬೈಲ್ ಸೇವಾ ಕಂಪನಿಗಳಾದ ಏರ್ಟೆಲ್, ವೊಡಾಫೋನ್, ಐಡಿಯಾ ಮತ್ತು ಬಿಎಸ್ಎನ್ಎಲ್ ಕಂಪನಿಗಳು ಮೊಬೈಲ್ ಡೇಟಾ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ.
Comments are closed.