ಕರ್ನಾಟಕ

ಉನ್ನತ ಶಿಕ್ಷಣಕ್ಕೆ ಒಪ್ಪದ ಮನೆಯವರು: ಕಾಂಗ್ರೆಸ್‌ ಮುಖಂಡನ ಪುತ್ರಿ ಆತ್ಮಹತ್ಯೆಗೆ ಶರಣು

Pinterest LinkedIn Tumblr


ಧಾರವಾಡ: ಉನ್ನತ ಶಿಕ್ಷಣಕ್ಕೆ ಮನೆಯವರು ಒಪ್ಪಲಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಿವಶಂಕರ ಹಂಪಣವರ ಪುತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಹರದ ಚರಂತಿಮಠ ಗಾರ್ಡನ ನಿವಾಸಿ ಪೂರ್ಣಿಮಾ ( ಪ್ರೀತಿ ) ಶಿವಶಂಕರ ಹಂಪಣ್ಣವರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಉದ್ಯಮಿ ಶಿವಶಂಕರ ಹಂಪಣ್ಣವರ ಇವರ ಮಗಳಾದ ಪೂರ್ಣಿಮಾ ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿಗೆ ಹೋಗಲು ಇಚ್ಚಿಸಿದ್ದಳು. ಮನೆಯಲ್ಲಿ ಕುಟುಂಬಸ್ಥರ ಪ್ರೀತಿಗೆ ಪಾತ್ರಳಾಗಿದ್ದ ಪೂರ್ಣಿಮಾಳನ್ನು ಬೆಂಗಳೂರಿಗೆ ಕಳುಹಿಸಲು ಹಿಂದೇಟು ಹಾಕಿದಾಗ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದು ಬಂದಿದೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.