ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆನ ಜಾವದ ಸುಮಾರಿಗೆ ಬಾರೀ ಸಿಡಿಲು-ಗುಡುಗು ಸಹಿತ ಬಾರೀ ಮಳೆಯಾದ ಬಗ್ಗೆ ವರದಿಯಾಗಿದೆ.
ಶನಿವಾರ ಸಂಪೂರ್ಣ ದಿನ ವಿಪರೀತ ಸೆಕೆಯ ವಾತಾವರಣವಿತ್ತು. ಬಳಿಕ ರಾತ್ರಿಯ ವೇಳೆಯೂ ಸೆಕೆ ಪ್ರಮಾಣ ಹೆಚ್ಚಳವಾಗಿದ್ದು ಮುಂಜಾನೆ 3.30ರ ಸುಮಾರಿಗೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.

ತೆಕ್ಕಟ್ಟೆಯಲ್ಲಿ ಕೃತಕ ನೆರೆ!
ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಅವಾಂತರದಿದ್ದಾಗಿ ಸಮಪ೯ಕವಾದ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತೆಕ್ಕಟ್ಟೆ ಬಸ್ ಸ್ಟಾಪ್ ಹೊಳೆಯಾಗಿ ಮಾಪ೯ಟ್ಟಿದೆ. ಸಾವ೯ಜನಿಕರು ವಿದ್ಯಾರ್ಥಿಗಳು ರಸ್ತೆಯಲ್ಲಿ ಬಸ್ ಕಾಯುವಂತಾಗಿದ್ದು ಸ್ಥಳಿಯಾಡಳಿತ ಇದರ ಬಗ್ಗೆ ತುತು೯ ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಸಾಮಾಜಿಕ ಕಾಯ೯ಕತ೯ ಸತೀಶ್ ಕುಮಾರ್ ತೆಕ್ಕಟ್ಟೆ ಆಗ್ರಹಿಸಿದ್ದಾರೆ.
Comments are closed.