
ಅಮರಾವತಿ: ಜಗದ್ವಿಖ್ಯಾತ ತಿರುಮಲದ ತಿಮ್ಮಪ್ಪ ದೇಗುಲ ಮತ್ತು ಟಿಟಿಡಿ ನಿರ್ವಹಿಸುವ ಇತರ ದೇವಾಲಯಗಳನ್ನು ‘ಸಂರಕ್ಷಿತ ಸ್ಮಾರಕಗಳನ್ನಾಗಿ’ ಘೋಷಿಸುವ ಬಗ್ಗೆ ಬರೆದಿದ್ದ ವಿವಾದಿತ ಪತ್ರವನ್ನು ಪುರಾತತ್ವ ಇಲಾಖೆ ಹಿಂಪಡೆದಿದೆ.
”ವಿಜಯವಾಡ ವ್ಯಾಪ್ತಿಯ ಪುರಾತತ್ವ ಇಲಾಖೆ ಟಿಟಿಡಿಗೆ ಈ ಪತ್ರವನ್ನು ಬರೆದಿತ್ತು. ಆದರೆ, ವಿವಾದದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಅದನ್ನು ಹಿಂಪಡೆಯಲಾಗಿದೆ,” ಎಂದು ಇಲಾಖೆಯ ಮಹಾ ನಿರ್ದೇಶಕರಾದ ಉಶಾ ಶರ್ಮಾ ಅವರು ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಸಿಂಘಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಟಿಟಿಡಿಯು ವೆಂಕಟೇಶ್ವರ ದೇಗುಲದ ಜತೆಗೆ ಇನ್ನೂ 12 ದೇವಾಲಯಗಳ ಆಡಳಿತವನ್ನು ನಿರ್ವಹಿಸುತ್ತಿದೆ. ಕೇಂದ್ರ ಸರಕಾರದ ಅಧೀನದ ಪುರಾತತ್ವ ಇಲಾಖೆಯ ಈ ನಿರ್ಣಯದ ಬಗ್ಗೆ ಆಂಧ್ರ ಸರಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.
Comments are closed.