
ಮೊಳಕಾಲ್ಮೂರು: ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಪರಿವರ್ತನಾ ಯಾತ್ರೆಗೆ 25 ಲಕ್ಷ ರೂಪಾಯಿ, ಮೋದಿ ಅವರ ಸಮಾವೇಶಕ್ಕೆ 4 ರಿಂದ 5 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ ಎಂದಿದ್ದಾರೆ.
ಮೊಳಕಾಲ್ಮೂರಿನಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಮುಖಂಡರು ಮತ್ತು ಶ್ರೀರಾಮುಲು ಅವರ ವಿರುದ್ಧ ಕಿಡಿ ಕಾರಿದರು. ‘ನಾನು ಬಿಜೆಪಿ ಸಂಘಟನೆ ಮಾಡಿದ್ದೇನೆ. ನಾಲ್ಕೈದು ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ, ಕೊನೆ ಕ್ಷಣದಲ್ಲಿ ನನಗೆ ಟಿಕೆಟ್ ತಪ್ಪಿಸಿದ್ದಾರೆ’ ಎಂದು ಆಕ್ರೋಶ ಹೊರ ಹಾಕಿದರು.
‘ಬಿಜೆಪಿ ಸಮಾವೇಶಕ್ಕೆ ಬಸ್‌ಗಳನ್ನು ಕಳುಹಿಸಿದ್ದೆ, ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಅವರಿಗೆ ಪರಿವರ್ತನಾ ಯಾತ್ರೆಗೆಂದು 25 ಲಕ್ಷ ರೂಪಾಯಿ ನೀಡಿದ್ದೆ’ ಎಂದಿದ್ದಾರೆ.
ಬುಧವಾರ ಸಂಜೆ ತಿಪ್ಪೇಸ್ವಾಮಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿತ್ತು.
-Udayavani
Comments are closed.