ಕ್ರೀಡೆ

ಎಬಿ ಡಿವಿಲಿಯರ್ಸ್ ಅಮೋಘ ಆಟ; ಪಂಜಾಬ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್ ಜಯ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್​ ಅಮೋಘ ಆಟದ ನೆರವಿನೊಡನೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ 4 ವಿಕೆಟ್ ಜಯ ಸಾಧಿಸಿದೆ.

ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಪಂಜಾಬ್ ಪಡೆ 19.2 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು.

ಪಂಜಾಬ್ ಪರವಾಗಿ ರ ಕೆ. ಎಲ್​ ರಾಹುಲ್​(47), ರವಿಚಂದ್ರನ್​ ಅಶ್ವಿನ್(33) ಹಾಗೂ ಕರುಣ್​ ನಾಯರ್​(29) ಉತ್ತಮ ರನ್ ಕಲೆ ಹಾಕಿದ್ದರು.

ಬೆಂಗಳೂರು ತಂಡದ ಪರವಾಗಿ ಉಮೇಶ್​ ಯಾದವ್​ 3 ವಿಕೆಟ್​ ಕಬಳಿಸಿ ಗಮನ ಸೆಳೆದಿದ್ದರು. ಕ್ರಿಸ್​ ವೋಕ್ಸ್, ಕುಲ್ವಂತ್ ಖೇಜ್ರೋಲಿಯ ಮತ್ತು ವಾಷಿಂಗ್ಟನ್​ ಸುಂದರ್​ ತಲಾ 2 ವಿಕೆಟ್, ಯಜುವೇಂದ್ರ ಚಹಾಲ್​ 1 ವಿಕೆಟ್ ಕಿತ್ತರು.

ಗೆಲುವಿಗೆ 156 ರನ್​ ಗುರಿ ಪಡೆದ ಆರ್​ಸಿಬಿ 19. 3 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 159 ರನ್ ಗಳಿಸುವುದರೊಡನೆ ವಿಜಯಿ ತಂಡವಾಗಿ ಹೊರಹೊಮ್ಮಿತು.

ಬೆಂಗಳೂರು ಪರವಾಗಿ ಎಬಿ ಡಿವಿಲಿಯರ್ಸ್​(57), ಕ್ವಿಂಟನ್​ ಡಿ ಕಾಕ್​(45), ವಿರಾಟ್​ ಕೊಹ್ಲಿ(21) ಮಂದೀಪ್​ ಸಿಂಗ್​(22) ರನ್ ಗಳಿಸಿ ಶ್ರೇಷ್ಠ ಪ್ರದರ್ಶನ ನೀಡಿದ್ದರು.

ಪಂಜಾಬ್ ಪರವಾಗಿ ರವಿಚಂದ್ರನ್​ ಅಶ್ವಿನ್​ 2 ವಿಕೆಟ್​ ಅಕ್ಷರ್​ ಪಟೇಲ್​, ಮುಜೀಬ್ ಉರ್ ರಹ್ಮಾನ್ ಹಾಗೂ ಆ್ಯಂಡ್ರಿವ್​ ಟೈ ಒಂದೊಂದು ವಿಕೆಟ್ ಪಡೆದುಕೊಂಡರು.

ಬೆಂಗಳೂರಿನ ಪಾಲಿಗೆ ಇದು ಈ ಸರಣಿಯ ಮೊದಲ ಗೆಲುವಾಗಿದೆ ಇದರೊಡನೆ ಫೈನಲ್ ಗೆಲುವಿನ ಕನಸಿಗೆ ರೆಕ್ಕೆ ಮೂಡಿದಂತಾಗಿದೆ.

Comments are closed.