ಮನೋರಂಜನೆ

ಸಿನಿಮಾ ಶೂಟಿಂಗ್; ದಿಢೀರ್ ಅಸ್ವಸ್ಥಗೊಂಡ ಮೆಗಾಸ್ಟಾರ್ ಬಿಗ್ ಬಿ

Pinterest LinkedIn Tumblr


ನವದೆಹಲಿ: ಜೋಧ್ ಪುರದಲ್ಲಿ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಬಚ್ಚನ್ ಅನಾರೋಗ್ಯದಿಂದ ಅಸ್ವಸ್ಥಗೊಂಡಿರುವ ಬಗ್ಗೆ ಹಾಗೂ ವೈದ್ಯರ ತಂಡ ಶೀಘ್ರವಾಗಿ ಸ್ಪಂದಿಸಿರುವ ಕುರಿತು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.

ಹವಾಮಾನ ಬದಲಾವಣೆಯಿಂದಾಗಿ ಅಮಿತಾಬ್ ಬಚ್ಚನ್ ಅರೋಗ್ಯದಲ್ಲಿ ಏರುಪೇರು ಕಂಡುಬಂದಿರುವುದಾಗಿ ವರದಿ ಹೇಳಿದೆ. ಬಚ್ಚನ್ ಅಸ್ವಸ್ಥದಿಂದಾಗಿ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ತಂಡ ಕೂಡಾ ಚಿಂತೆಗೀಡಾಗಿದೆ ಎಂದು ತಿಳಿಸಿದೆ. ಆದರೆ ಆರೋಗ್ಯ ಚೇತರಿಸಿಕೊಳ್ಳುತ್ತಿತ್ತು ಅಭಿಮಾನಿಗಳು ಆತಂಕಪಡಬೇಕಾಗಿಲ್ಲ ಎಂದು ಬಚ್ಚನ್ ಬ್ಲಾಗ್ ನಲ್ಲಿ ವಿನಂತಿಸಿಕೊಂಡಿದ್ದಾರೆ.

ಧೂಮ್ 3 ಸಿನಿಮಾ ನಿರ್ದೇಶಕ ವಿಜಯ್ ಆಚಾರ್ಯ ಕೃಷ್ಣಾ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಚ್ಚನ್ ಜತೆ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

-ಉದಯವಾಣಿ

Comments are closed.