ರಾಷ್ಟ್ರೀಯ

ಗುಡ್‌ ಮಾರ್ನಿಂಗ್‌ ಮೆಸೇಜ್‌ನಿಂದ ಅತ್ಯಾಚಾರಕ್ಕೊಳಗಾದ ಗೃಹಿಣಿ!

Pinterest LinkedIn Tumblr


ಹೈದರಾಬಾದ್‌: ಅಪರಿಚಿತ ವ್ಯಕ್ತಿಯೊಬ್ಬ ಕಳುಹಿಸಿದ ಗುಡ್‌ಮಾರ್ನಿಂಗ್‌ ಮೆಸೇಜ್‌ನಿಂದಾಗಿ ಗೃಹಿಣಿಯೊಬ್ಬರು ಅತ್ಯಾಚಾರಕ್ಕೊಳಗಾದ ಘಟನೆ ನಡೆದಿದೆ. ವೃತ್ತಿಯಲ್ಲಿ ಡಿಸ್ಕೋ ಜಾಕಿಯಾಗಿರುವ ಪಿ. ಪವನ್‌ ಕುಮಾರ್‌(27) ಈ ಕೃತ್ಯ ಮಾಡಿರುವುದಾಗಿ ತಿಳಿದು ಬಂದಿದೆ.

ಆರೋಪಿಯು ಅಪರಿಚಿತ ಮೊಬೈಲ್ ನಂಬರ್‌ಗೆ ಒಂದು ಮೆಸೇಜ್‌ ಕಳುಹಿಸುತ್ತಾನೆ. ಆದರೆ ಆ ಮೆಸೇಜ್‌ ನೋಡಿದ ವ್ಯಕ್ತಿ ಏಕೆ ಮೆಸೇಜ್‌ ಕಳುಹಿಸಿದೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆತ 34 ವರ್ಷದ ಗೃಹಿಣಿಗೆ ಮೆಸೇಜ್‌ ಕಳಿಸಿರುತ್ತಾನೆ. ತನ್ನಿಂದ ತಪ್ಪಾಯಿತು ಎಂದು ಕ್ಷಮೆ ಕೇಳಿದ ಈತ ಮಾರನೆಯ ದಿನದಿಂದ ಗುಡ್‌ಮಾರ್ನಿಂಗ್‌ ಮೆಸೇಜ್‌ ಕಳುಹಿಸಲಾರಂಭಿಸುತ್ತಾನೆ. ನಂತರ ಅವರಿಬ್ಬರು ಫೋನ್‌ನಲ್ಲಿ ಮಾತನಾಡಲಾರಂಭಿಸುತ್ತಾರೆ.

ಒಂದು ದಿನ ಆಕೆ ಮನೆಗೆ ಬಂದ ಅವನು ಆಕೆಯನ್ನು ರೇಪ್‌ ಮಾಡಿ, 55,000 ರೂಪಾಯಿ ಹಾಗೂ ಚಿನ್ನವನ್ನು ದೋಚಿ, ನೀನು ಸುಮ್ಮಿನಿರದೆ ಇದ್ದರೆ ಗಂಡನಿಗೆ ಹೇಳುವುದಾಗಿ ಬೆದರಿಸಿ ಹೋಗಿದ್ದ. ಆದರೆ ಆಕೆ ಗಂಡನಿಗೆ ವಿಷಯ ತಿಳಿಸುತ್ತಾಳೆ. ನಂತರ ದಂಪತಿ ಹೋಗಿ ಮೀರ್‌ಪೆಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ಬಳಿಯಿಂದ 5 ಗ್ರಾಂನ ಕಿವಿಯೋಲೆಯನ್ನು ವಶಪಡಿಸಿಕೊಂಡಿದ್ದಾರೆ.

Comments are closed.