ಉಡುಪಿ: ಮಲ್ಪೆಯ ಭಜನ ಮಂದಿರವೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನವಶಕ್ತಿ ವೈಭವ ನೃತ್ಯ ಕಾರ್ಯಕ್ರಮದ ವೇಳೆ ದೇವಿ ಪಾತ್ರಧಾರಿಯೊಬ್ಬರಿಗೆ ಶಕ್ತಿ ಆವಾಹನೆಯಾಗಿ ಪ್ರೇಕ್ಷಕರನ್ನು ಬೆರಗುಗೊಳಿಸಿದ ಘಟನೆ ನಡೆದಿದೆ, ಸನ್ನಿವೇಶದ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂದಿರದ ಮಹಿಳಾ ಮಂಡಲದ ಸದಸ್ಯರು ನವಶಕ್ತಿ ನೃತ್ಯ ವೈಭವ ಕಾರ್ಯಕ್ರಮವನ್ನು ಪ್ರದರ್ಶಿಸುತ್ತಿದ್ದರು. ಮಹಿಷಾಸುರ ವಧೆಯ ಸನ್ನಿವೇಶ ಹತ್ತಿರವಾಗುತ್ತಿದ್ದಂತೆ ಮುಖ್ಯ ದೇವಿ ಪಾತ್ರಧಾರಿಯ ಹಿಂಭಾಗದಲ್ಲಿ ಮೂರನೆಯವರಾಗಿದ್ದ ದೇವಿ ಪಾತ್ರಧಾರಿಯೊಬ್ಬರು ಆವೇಶಗೊಂಡರು, ಖಡ್ಗ ಹಿಡಿದುಕೊಂಡಿದ್ದ ಅವರು ನಡುಗಲಾರಂಭಿಸಿದ್ದಾರೆ. ಇದನ್ನು ಗಮನಿಸಿದ ಆಕೆಯ ಹಿಂದಿದ್ದ ಪಾತ್ರಧಾರಿಗಳು ನಿಯಂತ್ರಣಕ್ಕೆ ಪ್ರಯತ್ನಿಸಿದರು. ಮಹಿಷಾಸುರ ವಧೆಯಾಗುತ್ತಿದ್ದಂತೆ ಆಕೆ ಖಡ್ಗ ಝಳಪಿಸುತ್ತಿರುವುದನ್ನು ಗಮನಿಸಿದ ಉಳಿದ ಪಾತ್ರಧಾರಿಗಳು ಮತ್ತು ವೇದಿಕೆಗೆ ಧಾವಿಸಿದ ಸಂಘಟಕರು ಅವರನ್ನು ಹಿಡಿದುಕೊಂಡು ಸಮಾಧಾನ ಪಡಿಸಿದ್ದಾರೆ.
ಕೆಲ ಸಮಯದಲ್ಲಿಯೇ ಅವರು ಸಹಜ ಸ್ಥಿತಿಗೆ ತಲುಪಿದ್ದಾರೆ. ಈ ಸನ್ನಿವೇಶವನ್ನು ಕಾರ್ಯಕ್ರಮ ನೋಡಲು ಬಂದವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಈ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Comments are closed.