ಕರ್ನಾಟಕ

ಬಡ್ಡಿರಹಿತ ಸಾಲ ಕೊಟ್ಟಿದ್ದು ಮತಕ್ಕಾಗಿ: ಮಧುಗಿರಿ ಶಾಸಕರ ಓಪನ್​ ಸ್ಟೇಟ್​ಮೆಂಟ್​

Pinterest LinkedIn Tumblr


ತುಮಕೂರು: ವೋಟು ಹಾಕಲಿ ಎಂದೇ ಬಡ್ಡಿ ರಹಿತ ಸಾಲ ಕೊಡುತ್ತಿದ್ದೇವೆ. ಈ ಬಾರಿ ಪರಮೇಶ್ವರ್​ ಅವರನ್ನು ಗೆಲ್ಲಿಸದೆ ಇದ್ದರೆ ನಿಮ್ಮ ವಿರುದ್ಧ ನಾವು ಕಠಿಣರಾಗಬೇಕಾಗುತ್ತದೆ ಎಂದು ಮಧುಗಿರಿ ಶಾಸಕ ಕೆ.ಎನ್​.ರಾಜಣ್ಣ ಹಣ ಪಡೆದವರ ಬಳಿ ಹೇಳಿದ್ದಾರೆ.

ಕೊರಟಗೆರೆಯಲ್ಲಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ ಮತ್ತಿತರ ಮುಖಂಡ ಸಮ್ಮುಖದಲ್ಲೇ ಹೇಳಿಕೆ ನೀಡಿದ್ದು, ಒಮ್ಮೆ ಪರಮೇಶ್ವರ್​ ಅವರನ್ನು ಗೆಲ್ಲಿಸದೆ ಇದ್ದರೆ ನೀವ್ಯಾರೂ ಮತ್ತೆ ನಮ್ಮ ಬಳಿ ಬರಬಾರದು ಎಂದಿದ್ದಾರೆ.

ಚುನಾವಣಾ ಬಿಸಿ ಹೆಚ್ಚಾಗುತ್ತಿದೆ. ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮತದಾರರಿಗೆ ವಿವಿಧ ಆಮಿಷ ಒಡ್ಡಲಾಗುತ್ತಿದ್ದು ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ ಕ್ಷೇತ್ರ ಕೊರಟಗೆರೆ ಅತ್ಯುತ್ತಮ ಸಾಕ್ಷಿಯಾಗಿದೆ. ಪರಮೇಶ್ವರ್​ ತಮ್ಮ ಕ್ಷೇತ್ರದಲ್ಲಿ ಗೆಲ್ಲಲು ಕೆಲವು ಸರ್ಕಾರಿ ಯೋಜನೆಗಳ ದುರುಪಯೋಗಪಡಿಸಿಕೊಳ್ಳುತ್ತಿದ್ದು ಅದರಲ್ಲಿ ಮುಖ್ಯವಾಗಿ ಡಿಸಿಸಿ ಬ್ಯಾಂಕ್​ನಿಂದ ಬಡ್ಡಿ ರಹಿತ ಸಾಲ ಮಂಜೂರು ಮಾಡಿಸಿರುವುದು.

ಇಷ್ಟುದಿನ ಸಾಲ ಕೊಡಿ ಎಂದು ರೈತರು ಅಂಗಲಾಚಿದರೂ ಇಲ್ಲದ ಸಬೂಬು ಹೇಳಿ ವಾಪಸ್​ ಕಳಿಸುತ್ತಿದ್ದ ಡಿಸಿಸಿ ಬ್ಯಾಂಕ್​ನವರು ಇವತ್ತು ಅವರೇ ಕರೆದು ಕೊಡುತ್ತಿದ್ದಾರೆ. ಈಗಾಗಲೇ 900 ರೈತರು, 500ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳಿಗೆ ಹಣ ನೀಡಿದ್ದಾರೆ.

Comments are closed.