ಕರ್ನಾಟಕ

ಬಿಎಸ್‌ವೈ ಆಪ್ತ ಸಂತೋಷ್‌ಗೆ ರಿಲೀಫ್

Pinterest LinkedIn Tumblr


ಬೆಂಗಳೂರು: ವಿನಯ್‌ ಅಪಹರಣ ಪ್ರಕರಣದ ಆರೋಪಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಪ್ತ ಸಂತೋಷ್‌ಗೆ ನೀಡಲಾದ ನಿರೀಕ್ಷಣಾ ಜಾಮೀನು ರದ್ದುಪಡಿಸಬೇಕೆಂದು ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು 62ನೇ ಸಿಸಿಎಚ್‌ ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಂತೋಷ್‌ ನ್ಯಾಯಾಲಯ ನೀಡಿರುವ ನಿರೀಕ್ಷಣಾ ಜಾಮೀನು ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು ಅದನ್ನುರದ್ದುಗೊಳಿಸವಂತೆ ಪ್ರಕರಣದ ತನಿಖಾಧಿಕಾರಿ, ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಎ.ಆರ್‌.ಬಡಿಗೇರ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಫೆ.27ರಂದು ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿದ್ದ ನ್ಯಾಯಾಲಯ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಅಪಹರಣ ಪ್ರಕರದಲ್ಲಿ ರೌಡಿಶೀಟರ್‌ ಸೇರಿ ಆರು ಮಂದಿ ಆರೋಪಿಗಳು ಬಂಧನವಾಗುತ್ತಿದ್ದಂತೆ ಸಂತೋಷ್‌ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಈ ವೇಳೆ ಪೊಲೀಸರ ತನಿಖೆಗೆ ಸಹಕರಿಸಬೇಕು. ಹೊರರಾಜ್ಯಕ್ಕೆ ಹೋಗಬಾರದು ಎಂಬ ಇತರೆ ಷರತ್ತುಗಳನ್ನು ಕೋರ್ಟ್‌ ವಿಧಿಸಿತ್ತು. ಆದರೆ, ಸಂತೋಷ್‌ ತನಿಖೆಗೆ ಸಹಕಾರ ನೀಡದೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.

ತನಿಖೆಗೆ ತನ್ನ ಮೊಬೈಲ್‌ ಕೊಡದೆ ನಿಯಮ ಉಲ್ಲಂ ಸಿದ್ದಾನೆ ಎಂದು ಆರೋಪಿಸಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಆರೋಪಿ ಸಂತೋಷ್‌ ನ್ಯಾಯಾಲಯಕ್ಕೆ ಮತ್ತೂಂದು ಅರ್ಜಿ ಸಲ್ಲಿಸಿದ್ದು, ಕಾರ್ಯಕ್ರಮ ನಿಮಿತ್ತ ದೇಶ, ವಿದೇಶ ಹೋಗಬೇಕಿದೆ. ಅದಕ್ಕೆ ನ್ಯಾಯಾಲಯ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾನೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮಾ.3ಕ್ಕೆ ಮುಂದೂಡಿದೆ.

-ಉದಯವಾಣಿ

Comments are closed.