
ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಇಹಲೋಕ ತ್ಯಜಿಸಿದ್ದರೂ, ಅವರ ನಟನೆಯ ಕೊನೆಯ ಸಿನೆಮಾ ಮುಂದಿನ ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ.
ಶ್ರೀದೇವಿ, ಶಾರುಕ್ ಖಾನ್ ಅಭಿನಯದ ಝೀರೋದಲ್ಲಿ ನಟಿಸಿದ್ದರು. ಝೀರೋ ಶ್ರೀದೇವಿ ಅಭಿನಯದ ಕೊನೆಯ ಚಿತ್ರ. ‘ಝೀರೋ’ ಚಿತ್ರದಲ್ಲಿ ಶಾರುಕ್, ಆಲಿಯಾ ಭಟ್ ಮತ್ತು ಕರಿಷ್ಮಾ ನಟಿಸಿದ್ದಾರೆ. ಪಾರ್ಟಿಯೊಂದರಲ್ಲಿ ನಟಿ ಶ್ರೀದೇವಿ ತಮ್ಮದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
1997ರಲ್ಲಿ ಜುದಾಯಿ ಚಿತ್ರದ ನಂತರ ಸುದೀರ್ಘ ವಿರಾಮದಲ್ಲಿದ್ದ ಶ್ರೀದೇವಿ ‘ಇಂಗ್ಲೀಷ್ ವಿಂಗ್ಲೀಷ್’ ಚಿತ್ರದ ಮೂಲಕ 2012ರಲ್ಲಿ ಮತ್ತೆ ಪರದೆ ಮೇಲೆ ಕಾಣಿಸಿ ಕೊಂಡಿದ್ದರು.
Comments are closed.