ಕ್ರೀಡೆ

ಕ್ರಿಕೆಟಿನ ಮಾಜಿ ನಾಯಕನಿಗೆ ಎರಡು ದಾಖಲೆಗಳು ಮಿಸ್ !

Pinterest LinkedIn Tumblr


ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎರಡು ದಾಖಲೆಗಳು ಕೈತಪ್ಪಿದವು.

ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಧೋನಿ ವಿಕೆಟ್‌‌ ಹಿಂದುಗಡೆ 49 ಕ್ಯಾಚ್‌ ಪಡೆದಿದ್ದರು. ಕಳೆದ ಟಿ20 ಪಂದ್ಯದಲ್ಲಿ ಒಂದು ಕ್ಯಾಚ್‌ ಪಡೆದಿದ್ದರೆ 50 ಕ್ಯಾಚ್‌ ಪಡೆದ ದಾಖಲೆಗೆ ಸೇರ್ಪಡೆಯಾಗುತ್ತಿದ್ದರು. ಆದರೆ ದಾಖಲೆ ಮಿಸ್‌ ಆಗಿದೆ.

ಇನ್ನೊಂದು ದಾಖಲೆ ಕೇವಲ 33 ರನ್‌ಗಳಿಂದ ಮಿಸ್‌ ಆಗಿದೆ. ಧೋನಿ 318 ಏಕ ದಿನ ಪಂದ್ಯಗಳಲ್ಲಿ 272 ಇನ್ನಿಂಗ್ಸ್ ಆಡಿದ್ದು, 9967 ರನ್ ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ ಈ ರನ್‌ಗಳನ್ನು ಕಲೆ ಹಾಕಿದ್ದಲ್ಲಿ ವಿಕೆಟ್‌ ಕೀಪರ್‌/ಬ್ಯಾಟ್ಸ್‌ಮನ್‌ಗಳಲ್ಲಿ 10 ಸಾವಿರ ರನ್‌ಗಳನ್ನು ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಈ ದಾಖಲೆ ಶ್ರೀಲಂಕಾ ಮಾಜಿ ಕ್ಯಾಪ್ಟನ್‌ ಕುಮಾರ್‌ ಸಂಗಕ್ಕಾರ್‌ ಅವರ ಹೆಸರಿನಲ್ಲಿದೆ.

Comments are closed.