ಮನೋರಂಜನೆ

ಮೋಸ್ಟ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್‌ ಮದುವೆ ಮಾಡಿಕೊಳ್ಳಲು ದುಡ್ಡಿಲ್ಲವಂತೆ!

Pinterest LinkedIn Tumblr

ಮುಂಬೈ: ಬಾಲಿವುಡ್‌ನ ಮೋಸ್ಟ್‌ ಬ್ಯಾಚುಲರ್‌ ಎಂದರೆ ಅದು ಸಲ್ಮಾನ್‌ ಖಾನ್‌ ಎನ್ನುವುದು ಎಲ್ಲಿರಿಗೂ ತಿಳಿದಿರುವ ವಿಚಾರ. ಇದುವರೆಗೂ ಸಲ್ಲೂಗೆ ಯಾಕೆ ಮದುವೆಯಾಗಿಲ್ಲ ಎನ್ನುವುದೇ ಸದ್ಯಕ್ಕಿರುವ ಎಲ್ಲರ ಪ್ರಶ್ನೆ.

ಹೌದು, ಆದರೆ ಸಲ್ಮಾನ್‌ ಖಾನ್‌ ಯಾಕೆ ಮದುವೆಯಾಗಿಲ್ಲ ಅಥವಾ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುವ ಗೋಜಿಗೆ ಹೋದವರಲ್ಲ. ಆದರೆ, ಇದೀಗ ಸಲ್ಲು ತನ್ನ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದರಲ್ಲಿ ನಡೆದ ಸಂದರ್ಶನದಲ್ಲಿ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಲ್ಮಾನ್‌, ಮದುವೆ ತುಂಬ ದೊಡ್ಡ ವಿಷಯ. ಯಾರದ್ದೇ ಮದುವೆ ಮಾಡಬೇಕಾದರೆ ಅದಕ್ಕಾಗಿ ಲಕ್ಷ, ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಆದರೆ, ನನ್ನ ಬಳಿ ಅಷ್ಟೊಂದು ಹಣವಿಲ್ಲ. ಹಾಗಾಗಿ ನಾನಿನ್ನು ಸಿಂಗಲ್‌ ಆಗೇ ಉಳಿದಿದ್ದೇನೆ ಎಂದು ಉತ್ತರಿಸಿದ್ದಾರೆ.

52 ವರ್ಷದ ಸಲ್ಮಾನ್‌ ಖಾನ್‌ ಕತ್ರಿನಾ ಕೈಫ್ ಮತ್ತು ಲುಲಿಯಾ ವಂಟೂರ್‌ರೊಂದಿಗಿನ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಏನೂ ಹೇಳಿಕೊಳ್ಳದಿದ್ದರೂ, ಅವರ ನಡುವೆ ಪ್ರೇಮಾಂಕರುವಾಗಿದೆ ಎಂದೇ ಎಲ್ಲರೂ ಊಹಿಸಿದ್ದರು.

ಈ ಹಿಂದೆ ರೊಮೇನಿಯಾದ ಬ್ಯೂಟಿ ಲುಲಿಯಾ ವಂಟೂರ್‌ ಜತೆ ಕಾಣಿಸಿಕೊಳ್ಳುತ್ತಿದ್ದ ಸಲ್ಲು, ನಮ್ಮ ನಡುವೆ ಆ ರೀತಿ ಏನು ಇಲ್ಲ ಎಂದಿದ್ದರು. ಅಲ್ಲದೆ, ಅಲಿ ಅಬ್ಬಾಸ್ ಜಾಫರ್ ಅವರ ಚಿತ್ರದಲ್ಲಿ ನಟಿಸುತ್ತಿರುವ ಸಲ್ಮಾನ್‌ ಮತ್ತು ಕತ್ರಿನಾ ನಡುವಿನ ಹಳೆ ಪ್ರೇಮ ಮತ್ತೆ ಚಿಗುರಬಹುದು ಎಂದೇ ಹೇಳಲಾಗುತ್ತಿತ್ತು.

Comments are closed.