ಕರಾವಳಿ

ಕೂದಲು ಉದುರುವುದನ್ನು ತಡೆಯಲು ಮನೆಮದ್ದು

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಎಲ್ಲರೂ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ದಿನಕ್ಕೆ 100ಕೂದಲು ಉದುರುವುದು ಸಾಮಾನ್ಯ ಎಂದು ವೈದ್ಯರು ಹೇಳುತ್ತಾರೆ, ಆದರೆ ಅದಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ನೀವು ಕೂದಲಿನ ಕಡೆ ಗಮನಹರಿಸಬೇಕು.

ಕೂದಲು ಉದುರುವುದನ್ನು ತಡೆಯಲು ಮನೆಯಲ್ಲೇ ಮಾಡಬಹುದಾದ ಕೆಲವು ವಿಧಾನಗಳಿವೆ

ಮಾಡಬಹುದಾದ ವಿಧಾನಗಳು

1.ಅಲೋವೆರಾ ಜೆಲ್
ಅಲೋವೆರಾ ಅಥವಾ ಲೋಳೆ ರಸ ಕೂದಲಿಗೆ ಚಮತ್ಕಾರ ಮಾಡುವ ಗುಣ ಹೊಂದಿದೆ. ಸ್ನಾನ ಮಾಡುವ ಮುನ್ನ ಕೂದಲಿಗೆ ಅಲೋವೆರಾ ಲೋಳೆ ಯನ್ನು ತಲೆಗೆ ಹಚ್ಚಿ 1-2ಗಂಟೆಗಳ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲು ಉದರುವುದನ್ನು ತಡೆಯಬಹುದು.

2.ಎಣ್ಣೆ ಮಸಾಜ್
ಎಣ್ಣೆ ಇಂದ ನಿದಾನವಾಗಿ ಕೂದಲಿಗೆ ಮಸಾಜ್ ಮಾಡಿದರೆ ಸ್ಕ್ಯಾಲ್ಪ್ ಗೆ ರಕ್ತ ಸರಾಗವಾಗಿ ಹರಿಯುತ್ತದೆ ಮತ್ತು ಹೇರ್ ಫಾಲಿಕಲ್ ಗಳನ್ನೂ ಉತ್ತೇಜಿಸುತ್ತದೆ. ಅತ್ಯುತ್ತಮ ಫಲಿತಾಂಶಗಳಿಗಾಗಿ ತೆಂಗಿನಕಾಯಿ , ಆಲಿವ್, ಸಾಸಿವೆ ಅಥವಾ ಬಾದಾಮಿ ತೈಲವನ್ನು ಉಪಯೋಗಿಸಿ.
3.ನೆಲ್ಲಿಕಾಯಿ ಎಣ್ಣೆ ಅಥವಾ ಬೇವಿನ ಎಣ್ಣೆ ಯಲ್ಲಿ ಮಡಿದ ನೈಸರ್ಗಿಕ ತೈಲಗಳಿಂದ ಮಸ್ಸಾಜ್ ಮಾಡುವುದರಿಂದ ಕೂದಲು ಉದರುವುದನ್ನು ತಡೆಯಬಹುದಾಗಿದೆ.
4.ಕೂದಲು ಅತಿಯಾಗಿ ಉದರುತ್ತಿದ್ದರೆ ಕೂದಲಿಗೆ ಮೊಟ್ಟೆ ಮತ್ತು ಮೊಸರಿನಿಂದ ಮಡಿದ ಮಿಶ್ರಣವನ್ನು ಹೇರ್ ಪ್ಯಾಕ್ ಮಾಡುವುದರಿಂದ ಕೂದಲಿಗೆ ಅಗತ್ಯ ಪ್ರೊಟೀನ್ ದೊರಕುತ್ತದೆ, ಕೂದಲು ಶೈನಿಂಗ್ ಆಗುವುದಲ್ಲದೆ ಸದೃಢವಾಗುತ್ತದೆ.
5.ಕೂದಲು ತುದಿ ಯನ್ನು ಆಗಾಗ್ಗೆ ಕತ್ತರಿಸಿ ಹೇಗೆ ಮಾಡುವುದರಿಂದ ಸೀಳು ಕೊಡಲನ್ನು ಹೋಗಲಾಡಿಸಬಹುದು.ನೀವು ತಿನ್ನುವ ಆಹಾರ ಕೂಡ ನಿಮ್ಮ ಕೂದಲು ಉದುರುವಿಕೆಗೆ ಪ್ರೊಟೀನ್ ಯುಕ್ತ ಆಹಾರ ಸೇವಿಸಿ.

ಏನು ಮಾಡಬಾರದು..
1.ಕೂದಲು ಒದ್ದೆಯಾಗಿದ್ದಾಗ ಕೂದಲನ್ನು ಬಲವಂತವಾಗಿ ಉಜ್ಜಬಾರದು, ಹಾಗೆ ಉಜ್ಜುವುದರಿಂದ ಕೂದಲು ಹಾಳಾಗುತ್ತದೆ.
2.ಕೂದಲನ್ನು ಯಾವಾಗಲು ಕ್ಲಿಪ್ ನಲ್ಲಿ ಹಾಕಿರಬೇಡಿ, ಕೂದಲನ್ನು ಸ್ವಲ್ಪ ಫ್ರೀ ಬಿಡಿ.
3.ತುಂಬ ಬಿಸಿಯಾದ ನೀರನ್ನು ಕೂದಲಿಗೆ ಬಳಸ ಬೇಡಿ, ಮತ್ತು ಅತಿಯಾದ ಕೆಮಿಕಲ್ ಮತ್ತು ಬಿಸಿಯಾದ ಹೇರ್ ಡ್ರ್ಯೆರ್ಸ್ ಯಾವಾಗಲು ಬಳಸಬೇಡಿ.

Comments are closed.