ಕರಾವಳಿ

ಇಂಧನ ಉಳಿಸಿ ಮಾಸಾಚರಣೆ; ಕುಂದಾಪುರದಲ್ಲಿ ಸೈಕಲ್ ಜಾಥಾ

Pinterest LinkedIn Tumblr

ಕುಂದಾಪುರ: ಸೈಕಲ್ ಕ್ಲಬ್ ಕುಂದಾಪುರ ಇವರ ಆಶ್ರಯದಲ್ಲಿ ನಡೆಸಲಾದ ಸೈಕಲ ಜಾಥಾದಲ್ಲಿ 250ಕ್ಕೂ ಹೆಚ್ಚು ಮಂದಿ ಸೈಕಲ ಸವಾರರು ಭಾಗವಹಿಸಿದರು, ಸಂಗೀತಾ ಮೋಬೈಲ್ ವ್ಯವಸ್ಥಾಪಕ ಶಶಿ ಯವರು ಈ ಜಾಥಾದಲ್ಲಿ ಪಾಲ್ಗೊಂಡ ಸೈಕಲ್ ಸವಾರರಿಗೆ ಟಿ ಶರ್ಟ್‌ಗಳನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶಾಸ್ತ್ರೀ ಸರ್ಕಲ್ ನಿಂದ ಹೊರಟ ಈ ಜಾಥಾವು ಕೋಟೇಶ್ವರದ ತನಕ ಕ್ರಮಿಸಿ ಕುಂದಾಪುರ ಬೋರ್ಡ್‌ಹೈಸ್ಕೂಲಿನಲ್ಲಿ ಸಮಾಪನಗೊಂಡಿತು.

ಜಾಥಾದಲ್ಲಿ ಪಾಲ್ಗೊಂಡ ಸವಾರರ ಅಧೃಷ್ಟ ಚೀಟಿಯನ್ನು ಎತ್ತುವುದರ ಮುಖೇನ 10 ಸಮಾಧಾನಕರ, 2 ನೂತನ ಸೈಕಲ್‌ಗಳನ್ನು ಬಹುಮಾನವಾಗಿ ನೀಡಿ ಗೌರವಿಸಲಾಯಿತು. ಕುಂದಾಪುರದ ನೂತನ ಸೈಕಲ್ ಮಳಿಗೆ ಬೈಕ್ ಫಾರ್ಮ ಹಾಗೂ ಸಹನಾ ಗ್ರೂಪ್ ಇದರ ಮಾಲಕ ಸುರೇಂದ್ರ ಶೆಟ್ಟಿಯವರು ಕೊಡಮಾಡಿದ ಸೈಕಲ್‌ನ್ನು ಅದೃಷ್ಟಶಾಲಿಯಾಗಿ ಆಯ್ಕೆಯಾದ ದಿನಕರ ಪಟೇಲ್ ಹಾಗೂ ಧೀಕ್ಷಾ ಭಟ್ ಇವರು ಪಡೆದಿರುತ್ತಾರೆ.

ಸಂಗೀತ ಮೋಬೈಲ್, ಸಹನಾ ಗ್ರೂಪ್, ಜೆಸಿ‌ಐ ಕುಂದಾಪುರ ಇಷ್ಟ ಫುಡ್ಸ್ ಸಹಭಾಗಿತ್ವದಲ್ಲಿ ನಡೆದ ಜಾಥಾದಲ್ಲಿ ಬಿಜೆಪಿ ಮುಖಂಡ ಬಿ. ಕಿಶೋರ್ ಕುಮಾರ್, ಜೆಡಿ‌ಎಸ್ ಮುಖಂಡ ರಾಜೀವ ಕೋಟ್ಯಾನ್, ಜೆಸಿ ಅಧ್ಯಕ್ಷ ಶ್ರೀನಾಥ, ಅಕ್ಷತಾ ಗಿರೀಶ್, ಸದಾನಂದ ನಾವುಡ, ಸೈಕಲ್ ಕ್ಲಬ್‌ನ ಸದಸ್ಯರಾದ ಸಚಿನ್ ನಕ್ಕತ್ತಾಯ, ಅಕ್ಷಯ ಶೇಟ್, ಜೀತಮ್ ಸಾರಂಗ್, ಕಿರಣ್, ಅಮೃತ್‌ರಾಜ್,ಅರ್ಜುನ್ ಶೆಣೈ, ಕಲಾಕ್ಷೇತ್ರ ಕುಂದಾಪುರ ಇದರ ಸದಸ್ಯರಾದ ಶುಭಾಚಂದ್ರ ಹತ್ವಾರ್, ಗೋಪಾಲ ವಿ, ಶ್ರೀಧರ ಸುವರ್ಣ, ತ್ರಿವಿಕ್ರಮ್ ಪೈ, ಸಾಯಿನಾಥ ಶೇಟ್, ದಾಮೋದರ ಪೈ ಇನ್ನಿತರರು ಉಪಸ್ಥಿತರಿದ್ದರು, ಆಂಜನೇಯ ಗ್ಯಾಸ್‌ನ ಮಾಲಕ ಪ್ರವೀಣ ಕುಮಾರ ಟಿ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

Comments are closed.