
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸೋಮವಾರ ಆಯ್ಕೆಯಾಗಿದ್ದಾರೆ.
ಇಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಖ್ಯಾತ ಕಥೆಗಾರ, ಕವಿ, ಕಾದಂಬರಿಕಾರ ಹಾಗೂ ನಾಟಕಕಾರ ಚಂದ್ರಶೇಖರ್ ಕಂಬಾರ ಅವರು ಒಟ್ಟು 89 ಮತಗಳಲ್ಲಿ 56 ಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಗಾದಿಯ ಸ್ಪರ್ಧೆಯಲ್ಲಿದ್ದ ಒರಿಯಾ ಸಾಹಿತಿ ಪ್ರತಿಭಾ ರಾಯ್ ಅವರಿಗೆ 29 ಮತ ಹಾಗೂ ಮಹಾರಾಷ್ಟ್ರದ ಸಾಹಿತಿ ಬಾಲಚಂದ್ರ ನೆಮಾಡೆ ಅವರಿಗೆ ನಾಲ್ಕು ಮತಗಳನ್ನು ಪಡೆದಿದ್ದಾರೆ.
ಉಪಾಧ್ಯಕ್ಷರಾಗಿ ಮಾಧವ ಕೌಶಿಕ್ ಆಯ್ಕೆಯಾಗಿದ್ದಾರೆ. ಚುನಾಯಿತರ ಆಡಳಿತ ಅವಧಿ ಐದು ವರ್ಷಗಳಾಗಿರುತ್ತದೆ.
Comments are closed.