
ಕೋಲ್ಕತಾ: ತಂದೆ, ತಾಯಿಯ ವಿವಾಹದ ಸುವರ್ಣ ಮಹೋತ್ಸವವನ್ನು ಮಕ್ಕಳು ವಿಶೇಷ ರೀತಿಯಲ್ಲಿ ಆಚರಿಸುವ ಮೂಲಕ ಅಣ್ಣ-ತಂಗಿ ಮಾದರಿಯಾಗಿದ್ದಾರೆ. ಕೋಲ್ಕತಾದ ನ್ಯೂ ಬರಾಕ್ಪುರ ನಿವಾಸಿಗಳಾದ 80 ವರ್ಷದ ಶಶಿಮೋಹನ್ ನಾಥ್ ಮತ್ತು 70 ವರ್ಷದ ಗೀತಾನಾಥ್ ಜೋಡಿ 50ನೇ ವರ್ಷದ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಅಪ್ಪ-ಅಮ್ಮನ 50ನೇ ವರ್ಷ ವಿವಾಹ ಮಹೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ ಅಣ್ಣ ಪ್ರದೀಪ್ ಕುಮಾರ್ ನಾಥ್ ಮತ್ತು ತಂಗಿ ತೃಪ್ತಿ ಸುಮಾರು 250 ಮಂದಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಆಹ್ವಾನಿಸಿದ್ದರು. ಮದುವೆ ಸಂದರ್ಭದ ಎಲ್ಲ ಆಚರಣೆಗಳನ್ನುನೆರವೇರಿಸಿದ್ದಾರೆ. ಆದರೆ ಹಿರಿಯರ ಆರೋಗ್ಯ ಸಮಸ್ಯೆ ಕಾರಣದಿಂದ ಕೆಲವು ಆಚರಣೆಗಳನ್ನು ಕೈಬಿಡಲಾಗಿದೆ.
ಮುಂಬಯಿನಲ್ಲಿ ವಾಸಿಸುತ್ತಿರುವ ಪ್ರದೀಪ್ ತಂಗಿಯ ಸಹಾಯದೊಂದಿಗೆ ಎಲ್ಲ ವ್ಯವಸ್ಥೆಯನ್ನು ಚೆನ್ನಾಗಿ ನಿಭಾಯಿಸಿದ್ದರು. ‘ಇದು ನನ್ನ ತಂದೆ-ತಾಯಿಯ 50ನೇ ವರ್ಷದ ವಿವಾಹ ಸಂಭ್ರಮ. ಈ ಶುಭ ದಿನವಂತೆ ಅಂದಿನಂತೇ ವೈಭೀಕರಿಸಲು ನಿರ್ಧರಿಸಿದ್ದೆವು. ಅಂದಿನ ವಿವಾಹ ಸಂಭ್ರಮವನ್ನು ಮರುಕಳಿಸುವ ಪ್ರಯತ್ನ ಮಾಡಿದೆವು. ಅಪ್ಪ-ಅಮ್ಮ ಇಬ್ಬರು ತುಂಬಾ ಖುಷಿಯಾಗಿದ್ದಾರೆ ಎಂದು ಪ್ರದೀಪ್ ತಿಳಿಸಿದ್ದಾರೆ.
ಚಿತ್ರ: ಅಮರ್ ಕಾರ್
Comments are closed.