
ಬೆಂಗಳೂರು: ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಭಾರೀ ವಂಚನೆ ನಡೆಸುತ್ತಿದ್ದ ಇಬ್ಬರನ್ನು ಹಲವು ಸೊತ್ತುಗಳ ಸಮೇತ ವಶಕ್ಕೆ ಪಡೆದಿದ್ದಾರೆ.
ಬಂಧಿತರು ಶ್ರೀನಿವಾಸ್ ರೆಡ್ಡಿ ಮತ್ತು ಸುನೀಲ್ ಕುಮಾರ್ ಎಂದು ತಿಳಿದು ಬಂದಿದ್ದು, ಇಬ್ಬರು ಹಲವು ವಂಚಕರಿಗೆ ನಕಲಿ ಅಂಕಪಟ್ಟಿ ತಯಾರಿಸಿ ನೀಡಿ ಹಣ ಮಾಡಿರುವುದು ಬೆಳಕಿಗೆಬಂದಿದೆ.
ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಾರ್ಯಾಚರಣೆ ವೇಳೆ ಕಂಪ್ಯೂಟರ್ , ಜೆರಾಕ್ಸ್ ಯಂತ್ರ, ಪ್ರಿಂಟಿಂಗ್ ಯತ್ರ ಮತ್ತು ಅಂಕಪಟ್ಟಿಗಳಿಗೆ ಬಳಸಲಾಗುತ್ತಿದ್ದ ಅಪಾರ ಪ್ರಮಾಣದ ಪೇಪರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತರಿಬ್ಬರು ಎಸ್‌ಎಸೆಲ್ಸಿ, ಪಿಯುಸಿ, ಪದವಿ ಮತ್ತು ಪಿಎಚ್‌ಡಿ ನಕಲಿ ಸರ್ಟಿಫಿಕೇಟ್‌ಗಳನ್ನು ತಯಾರಿಸಿಕೊಡುತ್ತಿದ್ದರು ಎಂದು ತಿಳಿದು ಬಂದಿದೆ.
-ಉದಯವಾಣಿ
Comments are closed.