
ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಈಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಅವರ ಆನ್‌ಲೈನ್ ಮೂವಿ ‘ಗಾಡ್ ಸೆಕ್ಸ್ ಅಂಡ್ ಟ್ರೂತ್’ (GST) ಜ.26ರಂದು ಬಿಡುಗಡೆಯಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ವರ್ಮಾ, ದೀಪಿಕಾ ಪಡುಕೋಣೆಗಿಂತ ವಿದೇಶಿಯಳಾದ ಮಿಯಾ ಮಾಲ್ಕೋವಾ ಮೇಲೆ ತೋರುತ್ತಿರುವ ಪ್ರೀತಿಯನ್ನು ನೋಡಿ ಆನಂದದಲ್ಲಿ ನೋವು, ನೋವಿನಲ್ಲಿ ಆನಂದವಾಗುತ್ತಿದೆ ಎಂದು… ಸತ್ಯ ಮೇವ ಜಯತೇ ಎಂಬ ನಿನಾದವನ್ನು ‘ಸತ್ಯ ಮಿಯಾ ಜಯತೇ’ ಎಂದು ಟ್ವೀಟ್ ಮಾಡಿದ್ದಾರೆ.
Feeling happily sad and sadly happy to see Indians loving foreigner @MiaMalkova more than Indian @deepikapadukone Happy Republic day! Satya Mia Jayathe pic.twitter.com/bF9fpkkjdK
— Ram Gopal Varma (@RGVzoomin) January 26, 2018
ಗಣರಾಜ್ಯೋತ್ಸವದ ದಿನ ದೇಶದ ನಿನಾದವನ್ನು ಪೋರ್ನ್ ಸ್ಟಾರ್‌ಗೆ ಸಿಂಕ್ ಮಾಡುತ್ತಾ ಹೊಗಳಿರುವ ಬಗ್ಗೆ ಟ್ವಿಟ್ಟರಿಗಳು ಅವರ ಮೇಲೆ ಮುಗಿಬಿದ್ದಿದ್ದಾರೆ. ನೀನು ರಾಮ್ ಗೋಪಾಲ್ ವರ್ಮಾ ಅಲ್ಲ ಕಾಮ್ ಗೋಪಾಲ್ ವರ್ಮಾ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
Watch #GodSexTruth with head phones or good speakers because it’s @mmkeeravani ‘s music which is its strength as much as @MiaMalkova ‘s Beauty
— Ram Gopal Varma (@RGVzoomin) January 26, 2018
ಆದರೆ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ವರ್ಮಾ ‘GSTಯನ್ನು ಒಳ್ಳೆಯ ಹೆಡ್ ಫೋನ್ಸ್ ಅಥವಾ ಉತ್ತಮ ಸ್ಪೀಕರ್ ಹಾಕಿಕೊಂಡು ನೋಡಿ, ಯಾಕೆಂದರೆ ಮಿಯಾ ಮಾಲ್ಕೋವಾ ಸೌಂದರ್ಯದಷ್ಟೇ ಕೀರವಾಣಿ ಮ್ಯೂಸಿಕ್ ಸಹ ಇದೆ ಎಂದು ಟ್ವೀಟಿಸಿದ್ದಾರೆ.
Comments are closed.