ಕರ್ನಾಟಕ

ದೇವೇಗೌಡರು ಬರದಿದ್ದರೆ ಮಸ್ತಕಾಭಿಷೇಕ ನಿಂತು ಹೋಗುತ್ತಾ: ಸಚಿವ ಮಂಜು

Pinterest LinkedIn Tumblr


ಹಾಸನ: ದೇವೇಗೌಡರು ಬರದಿದ್ದರೆ ಮಸ್ತಕಾಭಿಷೇಕ ನಿಂತು ಹೋಗುತ್ತಾ ಎಂದು ಸಚಿವ ಎ.ಮಂಜು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಬಾಹುಬಲಿ ಮಸ್ತಕಾಭಿಷೇಕ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಾಡಿರುವ ಆರೋಪ ನೋವುಂಟು ಮಾಡಿದೆ. ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸೂಕ್ತ ಉತ್ತರ ನೀಡುವೆ. ಮಸ್ತಕಾಭಿಷೇಕ ಕಾಮಗಾರಿಯ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುವೆ. ಅವರು 2006ರ ಮಸ್ತಕಾಭಿಷೇಕದ ದಾಖಲೆ ಬಿಡುಗಡೆ ಮಾಡಲಿ ಎಂದು ದೇವೇಗೌಡರಿಗೆ ಸಚಿವ ಮಂಜು ಸವಾಲು ಹಾಕಿದರು.
ನಾನು ಅನಾಗರಿಕನಾಗಿ ಮಾತನಾಡಿಲ್ಲ. ಛಿ, ಥೂ.. ಎಂದು ಮಾತನಾಡಿರುವುದು ಸಲ್ಲ. ಮಾಜಿ ಸಿಎಂ ಕುಮಾರಸ್ವಾಮಿಗಿಂತ ಮೊದಲು ರಾಜಕೀಯದಲ್ಲಿದ್ದೇನೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರಿ ಸೇವಕರ ಕಾರ್ಯನಿರ್ವಹಣೆ ಮುಖ್ಯ, ಹುದ್ದೆಯಲ್ಲ ಎಂದು ಹರಿಹಾಯ್ದರು.

Comments are closed.