ಮನೋರಂಜನೆ

‘ಬಿಗ್‌‌ಬಾಸ್‌‌‌’ ಪಯಣ ಮುಗಿಸಿ ಹೊರನಡೆದ ಪ್ರಬಲ ಸ್ಪರ್ಧಿ ! ಫಿನಾಲೆ ಹಂತಕ್ಕೆ ಕಾಲಿಟ್ಟ ಐವರು !

Pinterest LinkedIn Tumblr

ಬೆಂಗಳೂರು: ಬಿಗ್‌‌ಬಾಸ್ ಕನ್ನಡ 5ನೇ ಆವೃತ್ತಿಯ ಗ್ರಾಂಡ್ ಫಿನಾಲೆ ಅಂತಿಮ ಹಂತಕ್ಕೆ ಇನ್ನು ಕೆಲವೇ ದಿನ ಬಾಕಿ ಇದ್ದು, ಈ ಮಧ್ಯೆ ಸೋಮವಾರ ಮನೆಯಿಂದ ಪ್ರಬಲ ಸ್ಪರ್ಧಿಯೆಂದೇ ಬಿಂಬಿತವಾಗಿದ್ದ ಸಮೀರಾಚಾರ್ಯ ಅವರು ಹೊರಬಿದ್ದಿದ್ದಾರೆ.

ಆರಂಭದಿಂದಲೂ ಬಿಗ್‌‌ಬಾಸ್ ಮನೆಯಲ್ಲಿ ತನ್ನ ಆಟದ ಸದುದ್ದೇಶವನ್ನು ಹೇಳಿಕೊಂಡು ಬಂದಿರುವ ಸಮೀರಾಚಾರ್ಯರ ವಿರುದ್ಧ ಮನೆ ಮಂದಿಯೆಲ್ಲಾ ಒಂದಲ್ಲ ಒಂದು ರೀತಿಯ ಟೀಕೆ-ಟಿಪ್ಪಣಿ ಮಾಡುತ್ತಲೇ ಬಂದಿದ್ದು, ಅವರು ಬಿಗ್‌‌ಬಾಸ್ ಮನೆಯ ಪಯಣವನ್ನು ಕೊನೆಗೊಳಿಸಿದ್ದಾರೆ.

ಎರಡು ದಿನಗಳ ಹಿಂದೆ ಬಿಗ್‌ಬಾಸ್‌‌ನಲ್ಲಿ ವೀಕ್ಷಕರ ಮತಗಳ ಅನುಸಾರ ಅನುಪಮಾ ಗೌಡ ಅವರು ಮನೆಯಿಂದ ಹೊರಗೆ ಹೋಗಿದ್ದರು. ಅವರು ಹೊರಹೋದ ಮೇಲೆ ಅವರಿಗಿಂತ ಸ್ವಲ್ಪ ಹೆಚ್ಚು ಮತಗಳನ್ನು ಪಡೆದಿರುವ ಸಮೀರಾಚಾರ್ಯ ಮನೆಯಿಂದ ಹೊರಕ್ಕೆ ಹೋಗಬೇಕಾಯಿತು.

ಈ ಮಧ್ಯೆ ಬಿಗ್‌‌ಬಾಸ್ ಮನೆಯಿಂದ ಹೊರಗೆ ಕಳುಹಿಸುವ ಪ್ರಕ್ರಿಯೆ ವಿಶೇಷವಾಗಿತ್ತು. ಮೊದಲು ಜೆಕೆಯವರು ಹೆಚ್ಚು ಮತಗಳನ್ನು ಗಳಿಸಿದ್ದ ಕಾರಣ ಅವರನ್ನು ಸೇಫ್ ಮಾಡಿದ ಬಿಗ್‌‌ಬಾಸ್, ಬಳಿಕ ಚಂದನ್ ಅವರನ್ನು ಸೇಫ್ ಮಾಡಿದರು.

ಅನಂತರ ಗಾರ್ಡನ್ ಏರಿಯಾದಲ್ಲಿ ಸಮೀರ್, ದಿವಾಕರ್, ನಿವೇದಿತಾ ಹಾಗೂ ಶ್ರುತಿ ಅವರಿಗೆ ಮನೆಯಿಂದ ಹೊರ ಹೋಗುವ ಮೊದಲು ಅಭಿಪ್ರಾಯ ಕೇಳಲಾಯಿತು. ಅವರ ಅಭಿಪ್ರಾಯದ ನಂತರ ಅವರ ಭಾವಚಿತ್ರವಿರುವ ಕಟೌಟನ್ನು ಕೆಳಗೆ ಬೀಳಿಸುವ ಮೂಲಕ ಸಮೀರಾಚಾರ್ಯರನ್ನು ಮನೆಯಿಂದ ಹೊರಗೆ ಕಳುಹಿಸಲಾಯಿತು.

Comments are closed.