ಉಡುಪಿ: ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯ ಬಗ್ಗೆ ಉಡುಪಿಯ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರಿನ ವಿಜ್ನಾನಿ ವಿಜಯ್ ಕುಮಾರ್ ಹೆಗ್ಡೆಯವರು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಸುರೇಶ್ ಪ್ರಭು ರವರನ್ನ ಭೇಟಿ ಮಾಡಿದರು.
ಮಂಗಳೂರಿಗೆ ಅಗಮಿಸಿದ್ದ ಸುರೇಶ ಪ್ರಭುರವರನ್ನ ಭೇಟಿ ಮಾಡಿದ ವಿಜಯ್ಕುಮಾರ್ ಹೆಗ್ಡೆ, ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದನೆ ಹಾಗೂ ಪರ್ಯಾಯ ಇಂಧನ ವ್ಯವಸ್ಥೆಯನ್ನು ಬಳಸುವ ಬಗ್ಗೆ ಸಮಾಲೋಚನೆ ನಡೆಸಿದರು.

ವಿಜಯ್ ಕುಮಾರ್ ಹೆಗ್ಡೆಯವರ ಸಂಶೋಧನೆ ಹಾಗೂ ಪರಿಸರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾತನಾಡಿದ ಸುರೇಶ್ ಪ್ರಭು, ದೇಶಕ್ಕೆ ಪರ್ಯಾಯ ಇಂಧನ ವ್ಯವಸ್ಥೆಯ ಅತ್ಯವಶ್ಯವಾಗಿದೆ. ಸಂಶೋಧನೆಗಳನ್ನು ಮಾಡುವಂತಹ ಸಂಶೋಧಕರನ್ನ ಸರಕಾರ ಗುರುತಿಸಿ ಪ್ರೋತ್ಸಾಹಿಸುತ್ತದೆ.ದೇಶಕ್ಕೆ ಪರ್ಯಾಯ ಇಂಧನ ವ್ಯವಸ್ಥೆಯ ಅವಶ್ಯಕತೆಯಿದೆ.ಈ ನಿಟ್ಟಿನಲ್ಲಿ ಸಮುದ್ರದಿಂದ ವಿದ್ಯುತ್ ಉತ್ಪಾದನೆ ಯೋಜನೆ ದೇಶಕ್ಕೆ ಹೆಚ್ಚು ಶಕ್ತಿ ತುಂಬಲಿದೆ ಎಂದರು.
ಈಗಾಗಲೇ ಸಮುದ್ರದ ಅಲೆಗಳಿಂದ ಪ್ರಯೋಗಿಕ ವಿದ್ಯುತ್ ಉತ್ಪಾದಿಸಿ ಯಶಸ್ವಿಯಾಗಿರುವ ವಿಡಿಯೋ ದಾಖಲೆಗಳನ್ನ ತೋರಿಸಲಾಯ್ತು .
ಮುಂದಿನ ಯೋಜನೆಯೂ ಉಡುಪಿ ಜಿಲ್ಲೆಯ ಕುಂದಾಪುರದ ಮರವಂತೆಯಲ್ಲಿ ಪ್ರಾರಂಭಿಸಲಿದ್ದು ,ಯೋಜನೆ ಬಗ್ಗೆ ಮಂಗಳೂರು ಮಾಜಿ ಶಾಸಕ ಯೋಗೀಶ್ ಭಟ್ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು.
ಯೋಜನೆಯ ಬಗ್ಗೆ ಸರಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸರಕಾರದ ಜೊತೆ ಚರ್ಚೆ ನಡೆಸಲು ದೆಹಲಿಗೆ ಸಚಿವರು ಅಹ್ವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.
Comments are closed.