
ಧಾರವಾಡ: ‘ನನ್ನ ಆತ್ಮೀಯ ಸ್ನೇಹಿತರು ಪಾಕಿಸ್ತಾನದಲ್ಲಿ ಇದ್ದಾರೆ. ನಾನು ಆಗಾಗ್ಗೆ ಪಾಕಿಸ್ತಾನಕ್ಕೆ ಹೋಗಿ ಬರುತ್ತೇನೆ’ ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಹೇಳಿದ್ದಾರೆ.
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಶನಿವಾರ ಮಾತನಾಡುತ್ತಿದ್ದರು.
‘ಪಾಕಿಸ್ತಾನದಲ್ಲಿ ಶಿಯಾ-ಸುನ್ನಿ ಮುಸ್ಲಿಮರ ನಡುವೆ ಜಗಳ ನಡೆಯುತ್ತದೆ. ನಮ್ಮ ದೇಶದಲ್ಲಿ ಶಿಯಾ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಆದರೂ ನಮ್ಮ ದೇಶದಲ್ಲಿ ಭಯದ ವಾತಾವರಣ ಇದೆ. ನನ್ನ ವೈಯಕ್ತಿಕ ವಿಚಾರಗಳನ್ನು ವ್ಯಕ್ತಪಡಿಸುವುದನ್ನು ಹತ್ತಿಕ್ಕುವ ಯತ್ನ ನಡೆದಿದೆ’ ಎಂದೂ ಕಾರ್ನಾಡ್ ಹೇಳಿದ್ದಾರೆ.
‘ಪ್ರಕಾಶ್ ರೈ ಮತ್ತು ಇರ್ಫಾನ್ ಖಾನ್ ಉತ್ತಮ ನಟರು. ಇವರ ಬಗ್ಗೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಸಂವಿಧಾನ ಬದಲಿಸುವ ಹೇಳಿಕೆ ಸರಿಯಲ್ಲ. ನಿಜವಾದ ಚುನಾವಣೆಗಳು ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತದೆ’ ಎಂದು ಕಾರ್ನಾಡ್ ನುಡಿದರು.
Comments are closed.