ಹುಟ್ಟಿದ ಕೂಸು ನೋಡ ನೋಡುತ್ತಲೇ ಬೆಳೆದು ಬಿಡುತ್ತದೆ. ಮಗುವಿಗೆ ಹಾಲುಣಿಸುವುದರ ಜೊತೆಗೆ ಇತರೇ ಆಹಾರಗಳ್ಳನ್ನು ನೀಡುವ ವಯಸ್ಸು ಬಂದಾಗ ಯಾವ ಯಾವ ಆಹಾರವನ್ನು ತಿನ್ನಿಸಬೇಕು ಎಂದು ನೀವು ಚಿಂತಿಸುತ್ತಿದ್ದೀರಾ? ನೀವು ಘನ ರೂಪದ ಆಹಾರವನ್ನು ಒಂದೇ ಬಾರಿ ಮಗುವಿಗೆ ನೀಡಬೇಡಿ. ಮಗುವಿನ ಹೊಟ್ಟೆಗೆ ಈ ಪದಾರ್ಥಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ ನೀವು ಮಗುವಿಗೆ ಜೀರ್ಣ ಕ್ರಿಯೆಗೆ ಸುಲಭವಾಗುವ ಆಹಾರಗಳಿಂದ ಪ್ರಾರಂಭಿಸಬೇಕು. ಯೋಚಿಸದಿರಿ, ಮಗುವಿಗೆ ಎದೆ ಹಾಲನ್ನು ಬಿಡಿಸುವ ಸಂದರ್ಭದಲ್ಲಿ, ಸುಲಭವಾಗಿ ಜೀರ್ಣವಾಗುವ ಆಹಾರಗಳ ಪಟ್ಟಿ ನಮ್ಮಲಿದೆ.
೧. ಹಣ್ಣಿನ ರಸದಿಂದ ಪ್ರಾರಂಭಿಸಿ
ಮಗುವಿಗೆ ೬ ತಿಂಗಳು ತುಂಬಿದ ಕೂಡಲೇ, ಗಟ್ಟಿ ಆಹಾರಗಳ್ಳನ್ನು ಪ್ರಾರಂಭಿಸುವ ಮೊದಲು, ಹಣ್ಣಿನ ರಸದಿಂದ ಪ್ರಾರಂಭಿಸಿ. ಇದಕ್ಕೆ ಉತ್ತಮ ಹಣ್ಣು ಎಂದರೆ, ಸೇಬು. ಒಂದು ಸೇಬನ್ನು ಚಿಕ್ಕದಾಗಿ ಕತ್ತರಿಸಿ, ಅದನ್ನು ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಅದರ ನಾರಿನಂಶವನ್ನು ಸೋಸಿ, ಅದರಿಂದ ಬರುವ ಹಣ್ಣಿನ ರಸವನ್ನು ತಣ್ಣಗಾಗಲು ಬಿಡಿ. ನಂತರ ನಿಮ್ಮ ಮಗುವಿಗೆ ಅದನ್ನು ನೀಡಿ.
೨. ಹಸಿ ತರಕಾರಿ ಹಾಗು ಹಣ್ಣು
ಒಂದು ಸಲ ಹಣ್ಣಿನ ರಸವನ್ನು ಇಷ್ಟ ಪಟ್ಟ ಮಗುವಿಗೆ, ಬೇರೆ ಬೇರೆ ರೀತಿಯ ಹಣ್ಣನ್ನು ತಿನ್ನಿಸಲು ಕಷ್ಟವಾಗುವುದಿಲ್ಲ. ತರಕಾರಿಗಳನ್ನು ನೀರಿನಲ್ಲಿ ಬೇಯಿಸಿ, ಪೇಸ್ಟ್ ರೀತಿ ಮಾಡಿ ತಿನ್ನಿಸಿ ಹಾಗು ಬಾಳೆ ಹಣ್ಣನ್ನು ಚೆನ್ನಾಗಿ ಕಯ್ಯಲ್ಲಿ ಕಿವುಚಿ ನಂತರ ಮಗುವಿಗೆ ನೀಡಿ. ಮಾವಿನ ಹಣ್ಣು, ಸಪೋಟ ಹಣ್ಣು, ಕಿತ್ತಳೆ ಹಣ್ಣನ್ನು ಸಹ ನೀಡಬಹುದು.
೩. ಮೊಸರಿನ smoothies
ಇದನ್ನು ಇಷ್ಟ ಪಡದ ಮಗುವಿಲ್ಲ. ಇದು ಮಗುವಿನ ಕ್ರಿಯೆಗೂ ಸಹಾಯ ಮಾಡುತ್ತದೆ. ಮೊದಲಿಗೆ ೧/೨ ಬಟ್ಟಲು ಕೆನೆಯಿಲ್ಲದ ಮೊಸರಿಗೆ ೧/೨ ಬಟ್ಟಲು ಯಾವುದಾದರು ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ರುಬ್ಬಿ, ಇದಕ್ಕೆ ಸ್ವಲ್ಪ ನೀರನ್ನು ಬೆರಸಿ, ನಿಮ್ಮ ಮಗುವಿಗೆ ನೀಡಿ. ಇನ್ನು ಮುಂದೆ ಇದನ್ನೇ ಮಾಡಿಕೊಡುವಂತೆ ನಿಮ್ಮ ಮಗು ನಿಮ್ಮನ್ನು ಪೀಡಿಸುತ್ತದೆ.
೪. ಧಾನ್ಯಗಳು
ವಿವಿಧ ಧಾನ್ಯಗಳಾದ ಬಾರ್ಲಿ, ಓಟ್ಸ್ ಅನ್ನು ಎದೆ ಹಾಲಿನ ಜೊತೆಗೆ ಅಥವಾ ಹಸುವಿನ ಹಾಲಿನ ಜೊತೆಗೆ ತಿನ್ನಿಸಲು ಪ್ರಾರಂಭಿಸಿ. ಇದು ಯಾವುದೇ ರೀತಿಯ ರುಚಿ ಇಲ್ಲದಿರುವುದರಿಂದ, ಮಗು ಇದನ್ನು ಉಗಿಯುವ ಸಾಧ್ಯತೆ ಹೆಚ್ಚು. ಆದರೆ ಇದು ಎಲ್ಲಾ ಮಕ್ಕಳಲ್ಲಿ ಸಾಮಾನ್ಯ. ಆದರೆ ನೀವು ಇದನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀಡುತ್ತಾ ಬನ್ನಿ. ಇದು ಪೋಷಕಾಂಶಗಳ ಪೇಸ್ಟ್ ಅಂದರೆ ತಪ್ಪಾಗುವುದಿಲ್ಲ.
ಒಟ್ಟಿನಲ್ಲಿ ಯಾವುದೇ ಘನ ಆಹಾರ ಪದಾರ್ಥಗಳ್ಳನ್ನು ನಿಮ್ಮ ಮಗುವಿಗೆ ಪ್ರಾರಂಭಿಸುವ ಮೊದಲು ನಿಮ್ಮ ಹತ್ತಿರದ ಮಕ್ಕಳ ತಜ್ಞರನ್ನು ಭೇಟಿ ಮಾಡಿ. ಕೆಲವೊಮ್ಮೆ ಮಕ್ಕಳ ದೇಹದ ತೂಕದ ಆಧಾರವಾಗಿ, ವೈದ್ಯರು ಅವರಿಗೆ ಆಹಾರವನ್ನು ಸೂಚಿಸುತ್ತಾರೆ.
ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Comments are closed.