ಕರ್ನಾಟಕ

ಮಹದಾಯಿ ಹೋರಾಟಗಾರರಿಂದ ‘ಜನ ಸಾಮಾನ್ಯರ ಪಕ್ಷ’

Pinterest LinkedIn Tumblr


ಬಾಗಲಕೋಟ: ನನೆಗುದಿಗೆ ಬಿದ್ದಿರುವ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಜನ ಸಾಮಾನ್ಯರ ಪಕ್ಷ’ (ಜೆಎಸ್‌ಪಿ) ಹುಟ್ಟು ಹಾಕಲಾಗಿದೆ.

ಉತ್ತರ ಕರ್ನಾಟಕದ ಸಮಸ್ಯೆಗಳಲ್ಲಿ ಪ್ರಮುಖವಾದ ಮಹಾದಾಯಿ ಯೋಜನೆ ಅನುಷ್ಠಾನವೂ ಒಳಗೊಂಡಿದೆ. ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿರುವ ಬಹುತೇಕರು ಜೆಎಸ್‌ಪಿಯ ಬಾವುಟ ಹಿಡಿದಿದ್ದಾರೆ. ಈಗಾಗಲೆ ಪ್ರಚಾರ ಆರಂಭಿಸಲಾಗಿದ್ದರೂ, ಕೂಡಲಸಂಗಮದಲ್ಲಿ ಇಂದು (ಜ.15) ರಂದು ನಡೆದಿರುವ ಬಹಿರಂಗ ಕಾರ್ಯಕ್ರಮದಲ್ಲಿ ಪಕ್ಷದ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲಾಗುತ್ತಿದೆ.

ಪಕ್ಷದ ಅಧ್ಯಕ್ಷ ಉದ್ಯಮಿ ಹಾಗೂ ಅಲೈನ್ಸ್ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಡಾ.ಅಯ್ಯಪ್ಪ ಕಾರ್ಯಕ್ರಮ ಚಾಲನೆ ನೀಡಿದ್ದಾರೆ. ಸರಕಾರದ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿರುವ ಮಹಾದಾಯಿ ಕಾಲುವೆ ನಿರ್ಮಾಣಕ್ಕೆ ಸ್ವತಃ 20 ಕೋಟಿ ರೂ.ನೀಡಿ 100 ಜೆಸಿಬಿ ಕೂಡ ಕಾಮಗಾರಿಗೆ ಒದಗಿಸಲು ಸಿದ್ಧ ಎಂದು ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷ ಡಾ.ಅಯ್ಯಪ್ಪ ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಪ್ರತಿ ಮನೆಯಿಂದ 100 ರೂ.ಸಂಗ್ರಹಿಸಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿರುವುದಾಗ ಪಕ್ಷದ ವಕ್ತಾರ ಟಿ.ಟಿ.ಮುರಕಟ್ನಾಳ ಮಾಹಿತಿ ನೀಡಿದ್ದಾರೆ.

Comments are closed.