
ಕೂಡಲಸಂಗಮ: ಲಿಂಗಾಯತ ಸಮಾಜದ ಸಾಂಸ್ಕೃತಿಕ ಸ್ಥಿತಿ ಕೆಡಿಸುವ ಉದ್ದೇಶದಿಂದ 1904ರಲ್ಲಿ ಹಾನಗಲ್ ಕುಮಾರ ಸ್ವಾಮೀಜಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದರು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿ ಲಿಂಗಾಯತ ಎನ್ನುವ ಜೇನುತುಪ್ಪದ ಬಾಟಲಿಗೆ ಅವಡಲೆಣ್ಣಿಯ ಚೀಟಿ ಹಚ್ಚಿ ನಮ್ಮ ಸಮಾಜವನ್ನು ಕೆಡಿಸಿದ್ದಾರೆ. ಇದೀಗ ಕಸವನ್ನು ತೆಗೆದು ಶುದ್ಧೀಕರಿಸಬೇಕಿದೆ. ವೀರಶೈವ ಮಹಾಸಭೆಯಲ್ಲಿರುವ ಲಿಂಗಾಯತ ಸದಸ್ಯರು ಕೂಡಲೇ ರಾಜೀನಾಮೆ ಸಲ್ಲಿಸಿ ಹೊರ ಬಂದು ಪ್ರತಿಭಟಿಸಬೇಕು. ಮಹಾಸಭಾಕ್ಕೆ ಪರ್ಯಾಯವಾಗಿ ಸ್ಥಾಪನೆ ಆಗುತ್ತಿರುವ ವಿಶ್ವಲಿಂಗಾಯತ ಪರಿಷತಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರವಾಗಿ ಸರಕಾರ ಸಮಿತಿ ನೇಮಕ ಮಾಡಿರುವುದು ಸ್ವಾಗತಾರ್ಹ. ಆದರೆ ವರದಿ ಸಲ್ಲಿಸಲು ಆರು ತಿಂಗಳು ಕಾಲಾವಧಿ ಕೇಳಿರುವುದು ಹಾಸ್ಯಾಸ್ಪದ. ಅಷ್ಟರಲ್ಲಿಯೇ ಚುಣಾವಣೆ ನಡೆದು ಯಡಿಯೂರಪ್ಪ ಅಥವಾ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ನಮ್ಮ ಹೋರಾಟಕ್ಕೆ ಖಂಡಿತ ಹಿನ್ನಡೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ವಿಚಾರವಾದಿ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ಮೇಲೆ ಒತ್ತಡ ಹೇರಿ ಒಂದು ಅಥವಾ ಒಂದುವರೆ ತಿಂಗಳಲ್ಲಿ ವರದಿ ಸಲ್ಲಿಸುವಂತೆ ಮಾಡಬೇಕು ಎಂದರು.
Comments are closed.