ಅಂತರಾಷ್ಟ್ರೀಯ

1.20 ಕೋಟಿ ಧಿರಂ ಜ್ಯಾಕ್‌ಪಾಟ್‌ ಗೆದ್ದ ಯುಎಇ ಭಾರತೀಯ

Pinterest LinkedIn Tumblr


ದುಬೈ : ಯುಎಇ ಯಲ್ಲಿ ವಾಸವಾಗಿರುವ 42ರ ಹರೆಯದ ಕೇರಳದ ಹರಿಕೃಷ್ಣನ್‌ ವಿ ನಾಯರ್‌ ಅವರು 1.20 ಕೋಟಿ (32 ಲಕ್ಷ ಅಮೆರಿಕನ್‌ ಡಾಲರ್‌) ಧಿರಂ ಜ್ಯಾಕ್‌ಪಾಟ್‌ ಗೆದ್ದಿದ್ದಾರೆ. ಇದು ಅಬುಧಾಬಿಯ ಈ ವರೆಗಿನ ಅತೀ ದೊಡ್ಡ ರಾಫೆಲ್‌ ಬಹುಮಾನವಾಗಿದೆ.

ಹರಿಕೃಷ್ಣ ನಾಯರ್‌ ಅವರು ದುಬೈ ಕಂಪೆನಿಯೊಂದರಲ್ಲಿ ಉದ್ಯಮ ಅಭಿವೃದ್ಧಿ ವ್ಯವಸ್ಥಾಪಕರಾಗಿದ್ದಾರೆ. 2002ರಿಂದ ಅವರು ತಮ್ಮ ಕುಟುಂಬದವರೊಂದಿಗೆ ಯುಎಇಯಲ್ಲಿ ವಾಸವಾಗಿದ್ದಾರೆ.

ತನಗೆ ಇಷ್ಟೊಂದು ದೊಡ್ಡ ಮೊತ್ತದ ಜಾಕ್‌ ಪಾಟ್‌ ಬಹುಮಾನ ಬಂದಿರುವುದಕ್ಕೆ ಖಲೀಜ್‌ ಟೈಮ್ಸ್‌ಗೆ ಪ್ರತಿಕ್ರಿಯಿಸಿರುವ ಹರಿಕೃಷ್ಣನ್‌, “ಈಗಲೂ ನನಗಿದನ್ನು ನಂಬಲು ಆಗುತ್ತಿಲ್ಲ; ಈ ಬಹುಮಾನ ಗೆದ್ದವನು ನಿಜಕ್ಕೂ ನಾನೆಯೇ?’ ಎಂದು ಹೇಳಿದ್ದಾರೆ. ಈ ಹಿಂದೆ ಎರಡು ಬಾರಿ ನಾನು ಈ ಜಾಕ್‌ ಪಾಟ್‌ ಟಿಕೆಟ್‌ ಖರೀದಿಸಿದ್ದೆ; ಆದರೆ ನನಗೆಂದೂ ಬಹುಮಾನ ಬಂದಿರಲಿಲ್ಲ ಎಂದವರು ಆನಂದಾಶ್ಚರ್ಯದಿಂದ ಹೇಳಿದ್ದಾರೆ.

“ನನ್ನ ಮನೆಯವರೊಂದಿಗೆ ನಾನು ಜಗತ್ತನ್ನು ಸುತ್ತಬೇಕು ಎಂದು ಆಶಿಸಿದವನು ನಾನು; ಬಹುಷಃ ಈಗ ಅದಕ್ಕೆ ಸಮಯ ಒದಗಿ ಬಂದಿದೆ’ ಎಂದು ಹರಿಕೃಷ್ಣನ್‌ ಹೇಳಿದರು.

-ಉದಯವಾಣಿ

Comments are closed.