ಕರ್ನಾಟಕ

ಯಡಿಯೂರಪ್ಪ ಅವರಲ್ಲಿ ಎಷ್ಟು ರಕ್ತವಿದೆ: ಸಿದ್ದರಾಮಯ್ಯ

Pinterest LinkedIn Tumblr


ಚಿಕ್ಕಮಗಳೂರು: ದಕ್ಷ, ಪ್ರಾಮಾಣಿಕ, ಸ್ವಚ್ಛ ಆಡಳಿತ ನಡೆಸುತ್ತೇನೆಂದು ರಕ್ತದಲ್ಲಿ ಬರೆದುಕೊಡುವುದಾಗಿ ಯಡಿಯೂರಪ್ಪ ಹೋದ ಕಡೆಯೆಲ್ಲ ಹೇಳುತ್ತಿದ್ದಾರೆ. ಅವರಲ್ಲಿ ಎಷ್ಟು ರಕ್ತವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಹೋದ ಕಡೆಯೆಲ್ಲ ರಕ್ತ ದಲ್ಲಿ ಬರೆದುಕೊಡುತ್ತೇನೆ ಅಂದರೆ ಏನು ಅರ್ಥ, ಅಧಿಕಾರ ಕೊಟ್ಟಾಗ ಏನು ಮಾಡಿದ್ದಾರೆ ಎಂಬುದನ್ನು ಜನ ನೋಡುತ್ತಾರೆ. ಮುಂದೆ ಏನು ಮಾಡುತ್ತೇನೆಂದು ಸುಳ್ಳು ಹೇಳಿದರೆ ಜನ ನಂಬುತ್ತಾರಾ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜೈಲಿಗೆ ಹೋಗಿದ್ದಾರೆ. ಅವರ ಕಾಲದಲ್ಲಿ ಏಳೆಂಟು ಜನ ಜೈಲಿಗೆ ಹೋಗಿದ್ದಾರೆ, ಬ್ಲೂ ಫಿಲ್ಮ್‌ ನೋಡಿದ್ದಾರೆ ಅನ್ನುವುದನ್ನು ಜನ ನೆನಪಿಸಿಕೊಳ್ಳುತ್ತಾರೆ. ರಕ್ತದಲ್ಲಿ ಬರೆದುಕೊಟ್ಟರೆ ಜನ ನಂಬುವುದಿಲ್ಲ ಎಂದರು.

Comments are closed.