ಮುಂಬೈ

ಮಹಾರಾಷ್ಟ್ರ ಬಂದ್‌ ಬಳಿಕ ಈಗ ಮೇವಾನಿ, ಖಾಲೀದ್‌ ಕಾರ್ಯಕ್ರಮ ರದ್ದು

Pinterest LinkedIn Tumblr


ಮುಂಬಯಿ: ಮುಂಬಯಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದು ಮಹಾರಾಷ್ಟ್ರ ಬಂದ್‌ ನಡೆದ ಒಂದು ದಿನದ ತರುವಾಯ ಇಂದು ಗುರುವಾರ ಗುಜರಾತ್‌ ನೂತನ ಶಾಸಕ ಮತ್ತು ದಲಿತ ಕಾರ್ಯಕರ್ತ ಜಿಗ್ನೇಶ್‌ ಮೇವಾನಿ ಮತ್ತು ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್‌ ಖಾಲೀದ್‌ ಪಾಲ್ಗೊಳ್ಳಲಿರುವ ಕಾರ್ಯಕ್ರಮವನ್ನು ಮುಂಬಯಿ ಪೊಲೀಸರು ರದ್ದು ಮಾಡಿದ್ದಾರೆ.

ಮೇವಾನಿ ಮತ್ತು ಖಾಲೀದ್‌ ಭಾಗವಹಿಸಬೇಕಿರುವ ವಿಲೇ ಪಾರ್ಲೆ ಸಭಾಂಗಣಕ್ಕೆ ಮುಂಬಯಿ ಪೊಲೀಸರು ಬೀಗ ಜಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಲೇ ಪಾರ್ಲೆಯಲ್ಲಿ ಪೊಲೀಸರು ಐಪಿಸಿ ಸೆ.149ರ ಪ್ರಕಾರ ನಿರ್ಬಂಧ ಹೇರಿದ್ದಾರೆ. ಈ ಸೆಕ್ಷನ್‌ ಪ್ರಕಾರ ಐದಕ್ಕಿಂತ ಹೆಚ್ಚು ಮಂದಿ ಸಾರ್ವಜನಿಕ ಸ್ಥಳದಲ್ಲಿ ಸೇರುವುದು ನಿಷಿದ್ಧವಾಗಿದೆ.

-ಉದಯವಾಣಿ

Comments are closed.