ಮನೋರಂಜನೆ

ಬಾಹುಬಲಿ ಖ್ಯಾತಿಯ ಪ್ರಭಾಸ್ ಹೊಸ ವರ್ಷದ ದಿನವೇ ಆಸ್ಪತ್ರೆ ಸೇರಿದ್ದು ಯಾಕಂತೆ…?

Pinterest LinkedIn Tumblr


ಬೆಂಗಳೂರು: ಬಾಹುಬಲಿ ಚಿತ್ರದ ಖ್ಯಾತ ನಟ ಪ್ರಭಾಸ್ ಅವರು ಭುಜದ ನೋವು ಕಾಣಿಸಿಕೊಂಡ ಕಾರಣ ಶಸ್ತ್ರಚಿಕಿತ್ಸೆಗಾಗಿ ಅಮೇರಿಕಾದ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಆಗಿದ್ದಾರೆ ಎಂದು ಟಾಲಿವುಡ್ ನ ಮಾಧ್ಯಮಗಳು ವರದಿ ಮಾಡಿವೆ.

‘ಸಾಹೋ’ ಸಿನಿಮಾದ ಫೈಟಿಂಗ್ ಸಿಕ್ವೇನ್ಸ್ ನಲ್ಲಿರುವ ಕಾರಣ ಅವರಿಗೆ ಮತ್ತೆ ಭುಜದ ನೋವು ಕಾಣಿಸಿಕೊಂಡಿದ್ದು, ತಮ್ಮಿಂದ ಮತ್ತೆ ಶೂಟಿಂಗ್ ಗೆ ತೊಂದರೆಯಾಗಬಾರದೆಂದು ಹೊಸ ವರ್ಷದ ದಿನವೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಭಾಸ್ ಅವರಿಗೆ ಬಾಹುಬಲಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಮ್ಮ ಎಡ ಭುಜಕ್ಕೆ ಬಲವಾಗಿ ಪೆಟ್ಟಾಗಿದ್ದು, ತುಂಬಾ ನೋವು ಇದ್ದ ಕಾರಣ ಶಸ್ತ್ರಚಿಕಿತ್ಸೆಗಾಗಿ 2016 ರಲ್ಲಿ ಅಮೇರಿಕಾಕ್ಕೆ ಹೋಗಿದ್ದರು. ಆದರೆ ಸಿನಿಮಾ ಶೂಟಿಂಗ್ ಇದ್ದ ಕಾರಣ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸದೆ ವಾಪಾಸ್ಸಾದರು. ಆದರೆ ಈ ನೋವು ಮತ್ತೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

Comments are closed.