ಕರಾವಳಿ

ನೈಸರ್ಗಿಕ ಪದಾರ್ಥಗಳಿಂದ ಬಕ್ಕತಲೆ ಸಮಸ್ಯೆ ನಿವಾರಣೆ

Pinterest LinkedIn Tumblr

ಬೋಳುತಲೆ ಅಥವಾ ಬಕ್ಕತನವು ಗಂಡಸರು ಮತ್ತು ಹೆಂಗಸರು, ಇಬ್ಬರಲ್ಲೂ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ತೊಂದರೆ. ಇದಕ್ಕೆ ಕಾರಣ ಅನುವಂಶಿಕ ಸಂಗತಿಗಳು, ಗರ್ಭಧಾರಣೆ, ಅಪೌಷ್ಟಿಕತೆ ಮತ್ತು ಒತ್ತಡವೂ ಆಗಿರಬಹುದು. ಇದನ್ನ ಬಗೆಹರಿಸಿಕೊಳ್ಳಲು ನೀವು ಹೆಚ್ಚು ಖರ್ಚು ಮಾಡದೆ ಸುಲಭವಾಗಿ ಸಿಗುವ ನೈಸರ್ಗಿಕ ಪದಾರ್ಥಗಳನ್ನೇ ಬಳಸಿಕೊಳ್ಳಬಹುದು.

ಸಾಮಾನ್ಯವಾಗಿ ಕೂದಲುಗಳು ಯಾವಾಗಲು ಬೆಳೆಯುತ್ತಲೇ ಇರುತ್ತವೆ. ಆದರೆ ಇಷ್ಟು ಸಮಯ ಅಂತ ಆದಮೇಲೆ ಅವು ಉದುರಿ ಹೋಗುತ್ತವೆ. ಹೀಗೆ ಕೂದಲು ಉದುರಿದ ಮೇಲೆ, ಆ ಜಾಗದಲ್ಲಿ ಹೊಸ ಕೂದಲು ಬೆಳೆಯಲು ಶುರು ಆಗುತ್ತವೆ. ಆದರೆ ಕೆಲವೊಮ್ಮೆ ಹೊಸ ಕೂದಲು ಬೆಳೆಯುವುದೇ ಇಲ್ಲ ಅಥವಾ ಬೆಳೆದರು ಗಟ್ಟಿಯಿಲ್ಲದೆ ಪುನಃ ಬೇಗ ಉದುರಬಹುದು. ಕೂದಲು ಕಸಿ ಮಾಡಿಸಿಕೊಳ್ಳುವ ಆಯ್ಕೆ ಇದ್ದರೂ, ಅದಕ್ಕೆ ಬಹಳಷ್ಟು ದುಡ್ಡು ಖರ್ಚು ಮಾಡಬೇಕಾಗುತ್ತದೆ ಮತ್ತು ನೋವು ಅನುಭವಿಸಬೇಕಾಗುತ್ತದೆ. ಹೀಗಾಗಿ ಕೂದಲು ಮರು ಬೆಳೆಯಲು ನೀವು ಇಲ್ಲಿ ನಾವು ತಿಳಿಸಿರುವ ನೈಸರ್ಗಿಕ ವಿಧಾನಗಳನ್ನ ಬಳಸಬಹುದು.

೧. ಗೋರಂಟಿ
ಮೊದಲಿಗೆ 60 ಗ್ರಾಂ ಗೋರಂಟಿ ಪುಡಿಗೆ 250 ಗ್ರಾಂ ಅಷ್ಟು ಸಾಸಿವೆ ಎಣ್ಣೆಯನ್ನ ಬೆರೆಸಿ. ಈ ಮಿಶ್ರಣವನ್ನ ಚೆನ್ನಾಗಿ ಬಿಸಿ ಮಾಡಿ, ಚೆನ್ನಾಗಿ ಸೋಸಿ, ಒಂದು ಟೈಟ್ ಮುಚ್ಚಳವಿರುವ ಡಬ್ಬಿಯಲ್ಲಿ ಹಾಕಿ ಇಡಿ. ಇದನ್ನ ನೀವು ಪ್ರತಿದಿನ ನಿಮ್ಮ ತಲೆಯ ಬೋಳು ಜಾಗಕ್ಕೆ ಹಚ್ಚಿಕೊಂಡು ಚೆನ್ನಾಗಿ ತಿಕ್ಕಿಕೊಳ್ಳಿ. ಹೀಗೆ ಕೆಲವು ವಾರಗಳ ಕಾಲ ಮಾಡುತ್ತಲೇ ಇದ್ದರೆ, ಸಕಾರಾತ್ಮಕ ಫಲಿತಾಂಶ ದೊರಕುವುದು.

೨. ಜೇನುತುಪ್ಪ
ಜೇನುತುಪ್ಪವು ಕೂದಲುದುರುವಿಕೆ, ಬಕ್ಕತನ ಔಷಧಿಗಳಿಗೆ ಒಂದು ಅತ್ಯುತ್ತಮ ನೈಸರ್ಗಿಕ ಪರ್ಯಾಯ ಮತ್ತು ಕೂದಲು ಬೆಳವಣಿಗೆಗೆ ಒಂದು ಉತ್ತಮ ಪ್ರಚೋದಕ. ನೀವು ಜೇನುತುಪ್ಪವನ್ನ ನಿಮ್ಮ ಟೀ ಅಲ್ಲಿ ಬೆರೆಸಿಕೊಂಡು ಕುಡಿಯಬಹುದು, ಬ್ರೆಡ್ ಜೊತೆ ತಿನ್ನಬಹುದು ಅಥವಾ ಪ್ರತಿದಿನ ಹಾಗೆನೇ ಸ್ವಲ್ಪ ತಿನ್ನಬಹುದು. ಇದು ನಿಮ್ಮ ಬಕ್ಕತನವನ್ನ ಕಡಿಮೆ ಮಾಡಿ, ಕೂದಲುದುರುವಿಕೆಯನ್ನು ಕೂಡ ತಡೆಯುತ್ತದೆ.

೩. ಗ್ರೀನ್ ಟೀ ಎಳೆಗಳು
ಗ್ರೀನ್ ಟೀ ಎಲೆಗಳನ್ನ ಮೊದಲು ಕುದಿಯುವ ನೀರಿನಲ್ಲಿ ಹಾಕಿ ಕುದಿಸಿಕೊಳ್ಳಿ. ನಂತರ ಸ್ವಲ್ಪ ಹೊತ್ತು ಬಿಟ್ಟು, ಅದು ಬೆಚ್ಚಗೆ ಆಗುವವರೆಗೆ ಕಾಯಿರಿ. ನಂತರ ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ಹಚ್ಚಿಕೊಂಡು ಒಂದು ಗಂಟೆಯವರೆಗೆ ಹಾಗೆಯೇ ಬಿಡಿ. ಅನಂತರ ಅದನ್ನ ಬಿಸಿ ನೀರಿನಿಂದ ತೊಳೆಯಿರಿ. ಗ್ರೀನ್ ಟೀ ಆಂಟಿಆಕ್ಸಿಡೆಂಟ್ ಗುಣ ಹೊಂದಿದ್ದು, ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

೪. ನ್ಯಾಚುರಲ್ ಜ್ಯೂಸು
ಇದು ಕೊನೆಯ ವಿಧಾನವಾಗಿದ್ದರೂ ತುಂಬಾನೇ ಮುಖ್ಯವಾದ, ಪರಿಣಾಮಕಾರಿಯಾದ ವಿಧಾನ.
ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನ ಜೇಜ್ಜಿ, ಅದರ ರಸವನ್ನ ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ. ಅದನ್ನ ರಾತ್ರಿಯೆಲ್ಲ ಬಿಟ್ಟು, ಬೆಳಗ್ಗೆ ಎದ್ದಮೇಲೆ ತೊಳೆದುಕೊಳ್ಳಿ. ಇದನ್ನ ಕೆಲವು ದಿನಗಳಿಗೊಮ್ಮೆ ಮಾಡಿ.

Comments are closed.