ಆರೋಗ್ಯ

ಗಂಡ-ಹೆಂಡತಿ ಮಧ್ಯೆಗಿನ ಸೆಕ್ಸ್ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸುವುದು ಎಷ್ಟು ಸರಿ…? ಇಲ್ಲಿದೆ ಉತ್ತರ….

Pinterest LinkedIn Tumblr

ಬೆಂಗಳೂರು: ಗಂಡ ಹೆಂಡಿರ ನಡುವೆ ನಾಲ್ಕು ಗೋಡೆ ಮಧ್ಯೆ ನಡೆಯುವ ವಿಚಾರಗಳು ಗೋಡೆ ದಾಟಿ ಹೊರ ಹೋಗಬಾರದು ಎಂದು ನಂಬಿರುವುದು ನಮ್ಮ ಸಂಸ್ಕೃತಿ. ಹಾಗಿರುವಾಗ ಸೆಕ್ಸ್ ವಿಚಾರದ ಬಗ್ಗೆ ಮೂರನೆಯವರ ಬಳಿ ಹೇಳಿಕೊಳ್ಳುವುದು ಸರಿಯೇ?

ಗಂಡ ಹೆಂಡಿರ ನಡುವೆ ನಡೆಯುವ ಲೈಂಗಿಕ ವಿಚಾರಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುವ ಸಂಗಾತಿಯ ಜತೆ ಸಿಟ್ಟಾಗದೇ ಕೆಲವು ಸಲಹೆಗಳನ್ನು ಪಾಲಿಸುವುದು ಒಳಿತು.

ಕಾರಣ ತಿಳಿದುಕೊಳ್ಳಿ
ಒಂದು ವೇಳೆ ಸಂಗಾತಿ ನಿಮ್ಮ ಸೆಕ್ಸ್ ವಿಚಾರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನಿಜವಾದ ಕಾರಣ ತಿಳಿದುಕೊಳ್ಳಿ. ಒಂದು ವೇಳೆ ತಮಗಿರುವ ಅಜ್ಞಾನದ ಕುರಿತು ಅವರು ಸ್ನೇಹಿತರೊಂದಿಗೆ ಚರ್ಚಿಸಿ ತಿಳಿದುಕೊಳ್ಳುತ್ತಿದ್ದರೆ ಸರಿ. ತಮಾಷೆಗಾಗಿ ಮಾಡುತ್ತಿದ್ದರೆ ಬೇರೆಯೇ ರೀತಿ ನಿಭಾಯಿಸಬೇಕು.

ನೀವೇ ಪರಸ್ಪರ ಸಮಾಲೋಚಿಸಿ
ಸಂಗಾತಿ ಜತೆ ಕೂತುಕೊಂಡು ಚರ್ಚಿಸಿ. ಒಂದು ವೇಳೆ ಅವರು ನಿಮ್ಮೊಂದಿಗೆ ಸೆಕ್ಸ್ ವಿಚಾರದಲ್ಲಿ ಅತೃಪ್ತರಾಗಿದ್ದರೆ ಅದನ್ನು ಹೇಗೆ ಸರಿಪಡಿಸಬಹುದೆಂದು ಚರ್ಚಿಸಿ. ನೀವು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಯಾವ ರೀತಿ ಬದಲಾಗಬೇಕೆಂದು ಕೇಳಿಕೊಳ್ಳಿ. ಹಾಗೆಯೇ ನಿಮ್ಮ ಇಷ್ಟಗಳೇನೆಂದು ಹೇಳಿ.

ಪ್ರೈವೆಸಿಗೆ ಮಹತ್ವ ಕೊಡಿ
ನಿಮ್ಮಿಬ್ಬರ ನಡುವೆ ನಡೆಯುವ ವಿಚಾರಗಳನ್ನು ಮೂರನೆಯವರಿಗೆ ಹೇಳುವುದು ನಿಮಗಿಷ್ಟ ಇಲ್ಲ ಎನ್ನುವುದನ್ನು ಅರ್ಥವಾಗುವಂತೆ ಹೇಳಿ. ಒಂದು ವೇಳೆ ಒಪ್ಪದಿದ್ದರೆ ಮತ್ತೆ ಮಂಚಕ್ಕೆ ಕರೆದಾಗ ಬರುವುದಿಲ್ಲವೆಂದು ಲೈಟಾಗಿ ಎಚ್ಚರಿಕೆ ಕೊಡಿ! ಆಗಲೂ ಪರಿಸ್ಥಿತಿ ಸುಧಾರಿಸಿದಿದ್ದಾಗ ಲೈಂಗಿಕ ತಜ್ಞರನ್ನು ಸಮಾಲೋಚಿಸುವುದು ಒಳಿತು.

Comments are closed.