ಕರ್ನಾಟಕ

ಹೊಸವರ್ಷ: ನಂದಿ ಬೆಟ್ಟ, ಆವಲ ಬೆಟ್ಟಕ್ಕೆ ಪ್ರವೇಶ ನಿಷೇಧ

Pinterest LinkedIn Tumblr


ಬೆಂಗಳೂರು: ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಚಿಕ್ಕಬಳ್ಳಾಪುರದ ನಂದಿಬೆಟ್ಟ ಮತ್ತು ಆವಲ ಬೆಟ್ಟಕ್ಕೆ ಹೊಸ ವರ್ಷದ ವೇಳೆ ಪ್ರವೇಷ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಹೊಸ ವರ್ಷದ ವೇಳೆ ಪ್ರವಾಸಿಗರು ಹರಿದು ಬಂದು ಕಳವಳಕಾರಿ ಘಟನೆಗಳು ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮುಂಜಾಗೃತಾ ಕ್ರಮವಾಗಿ ಪ್ರವೇಶವನ್ನೇ ನಿಷೇಧಿಸಲಾಗಿದೆ.

ಡಿಸೆಂಬರ್‌ 31 ರ ಸಂಜೆ 4 ಗಂಟೆಯಿಂದ ಜನವರಿ 1 ರ ಬೆಳಗ್ಗೆ 8 ಗಂಟೆಯವರೆಗೆ ಪ್ರವಾಸಿ ತಾಣಗಳಿಗೆ ಯಾರಿಗೂ ಪ್ರವೇಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಚೆಕ್‌ ಪೋಸ್ಟ್‌ಗಳಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗುತ್ತಿದೆ.

-ಉದಯವಾಣಿ

Comments are closed.