
ಸಿನಿಮಾ ಸೆಲೆಬ್ರಿಟಿಗಳು ಫ್ಯಾಶನ್ಗೆ ತುಂಬಾನೇ ಒತ್ತು ಕೊಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಮಾಜಿ ವಿಶ್ವ ಸುಂದರಿ, ನೀಲಿ ಕಂಗಳ ಚೆಲುವೆ ಐಶ್ವರ್ಯ ರೈ ಬಚ್ಚನ್ ದುಬಾರಿ ಗೌನ್ ತೊಟ್ಟು ಸಖತ್ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಈ ಗೌನ್ ಬೆಲೆ ಎಷ್ಟು ಗೊತ್ತಾ?
ಬರೋಬ್ಬರಿ 3.73 ಲಕ್ಷ ರೂ. ಅಂದಹಾಗೆ ಐಶ್ ಈ ದುಬಾರಿ ಗೌನ್ ಧರಿಸಿ ಮಿಂಚಿದ್ದು ಅಂಬಾನಿ ಕುಟುಂಬದ ಪಾರ್ಟಿಯೊಂದರಲ್ಲಿ ಎನ್ನುವುದು ವಿಶೇಷ. ಅಂಬಾನಿ ಕುಟುಂಬದಿಂದ ಆಯೋಜಿಸಲಾಗಿದ್ದ ಅದ್ಧೂರಿ ಡಿನ್ನರ್ ಪಾರ್ಟಿಯಲ್ಲಿ ಐಶ್ ಬಂಗಾರದಲ್ಲಿ ಅದ್ದಿದ ಗೊಂಬೆಯಂತೆ ಕಂಗೊಳಿಸಿದರು.
ಇನ್ನು ಹಳದಿ ಬಣ್ಣ ಮಿಶ್ರಿತ ಈ ಮನಮೋಹಕ ಗೌನನ್ನು ಡಿಸೈನ್ ಮಾಡಿದ್ದು ಆಸ್ತಾ ಶರ್ಮಾ. ಬರೀ ಡಿನ್ನರ್ ಪಾರ್ಟಿಗೆ ಐಶ್ ಇಷ್ಟೊಂದು ದುಬಾರಿ ಬಟ್ಟೆ ತೊಟ್ಟಿರುವುದು ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಐಶ್ ‘ಫನ್ನಿ ಖಾನ್’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
Comments are closed.