ರಾಷ್ಟ್ರೀಯ

ಸಾವಿನಂಚಿನಲ್ಲಿದ್ದ ತಾಯಿಯ ಕೊನೆಯಾಸೆ ಪೂರೈಸಲು ಈತ ಆದ ಮದುವೆಯನ್ನೊಮ್ಮೆ ನೋಡಿ…

Pinterest LinkedIn Tumblr

ಸಾವು ಬಂದು ಆಕೆಯ ಹಾಸಿಗೆ ಬಳಿ ಬಂದು ನಿಂತಿದೆ. ಆದರೆ ಆ ತಾಯಿಗೆ ಕಣ್ಮುಚ್ಚುವ ಮುನ್ನ ಮಗ ಬಿಶ್ವಾಂತ್‌ ರಾಯ್‌ ಬರ್ಧಾನ್‌ ಮದುವೆಯನ್ನು ಕಣ್ತುಂಬಿಕೊಳ್ಳಬೇಕೆಂಬುದೇ ಕೊನೆಯ ಆಸೆ.

ತಾಯಿಯ ಆಸೆಯನ್ನು ಪೂರೈಸಲು ಆತ ಮುಂದಾದ. ಮದುವೆಯಾಗುವ ಹುಡುಗಿ ಅಮೆರಿಕದಲ್ಲಿದ್ದಳು. ಆಕೆಗೆ ಬರಲು ಸಾಧ್ಯವಾಗಿಲ್ಲ. ಆದ್ರೂ ಆತ ತನ್ನ ತಾಯಿಯ ಕೊನೆಯ ಆಸೆಯನ್ನು ನೆರವೇರಿಸಲು ಮುಂದಾದ. ತಾಯಿ ಮಲಗಿದ್ದ ರೂಬಿ ಜನರಲ್‌ ಆಸ್ಪತ್ರೆಯ ಕೋಣೆಯಲ್ಲಿ ಮದುವೆ ಶಾಸ್ತ್ರಕ್ಕೆ ಸಿದ್ಧತೆ ಮಾಡಲಾಯಿತು.

ಬೆಂಗಾಲಿ ಮದುವೆಯಂತೆ ಶಾಸ್ತ್ರಗಳು ನಡೆಯುತ್ತಿದ್ದೆವು. ಮದುಮಗನ ವೇಷದಲ್ಲಿದ್ದ ಮಗನ ರೂಪವನ್ನು ತಾಯಿ ಕಣ್ತುಂಬಿಕೊಂಡು ಆನಂದಿಸುತ್ತಿದಳು. ಅಮೆರಿಕದಲ್ಲಿದ್ದ ಹುಡುಗಿಯೂ ಮದುವೆಗೆ ಸಿದ್ಧಳಾಗಿ ಸ್ಕೈಪ್‌ ಮುಂದೆ ಬಂದಳು.

ಅವರಿಬ್ಬರ ಮದುವೆ ಶಾಸ್ತ್ರೋಕ್ತವಾಗಿ ನಡೆಯಿತು. ಆ ತಾಯಿ ಮಗ-ಸೊಸೆಗೆ ಮನ ತುಂಬಿ ಹರಿಸಿದಳು.

ಈ ರೀತಿಯ ಮನ ತುಂಬಿ ಬರುವ ದೃಶ್ಯಕ್ಕೆ ಡಿಸೆಂಬರ್‌ 7ರಂದು ಅಲ್ಲಿದ್ದವರೆಲ್ಲರೂ ಸಾಕ್ಷಿಯಾದರು. ಬಿಶ್ವಾಂತ್‌ ರಾಯ್‌ ಬರ್ಧಾನ್‌ ಮುಖದಲ್ಲಿ ತಾಯಿಯ ಆಸೆ ಪೂರೈಸಿದ ತೃಪ್ತಿ.

Comments are closed.