
ಬೆಂಗಳೂರು: ಹೆಚ್ಚಿನ ನವ ದಂಪತಿಗಳು ಈಗಲೇ ಮಕ್ಕಳಾಗುವುದು ಬೇಡ ಎಂದುಕೊಂಡಿರುತ್ತಾರೆ. ಆದರೆ ಕಾಂಡೋಮ್ ಗಳನ್ನು ಬಳಸುವುದರಿಂದ ಅವರಿಗೆ ಮಿಲನ ಸುಖ ಸಿಗದೆ ಇರಬಹುದು. ಅಂತವರಿಗೆ ಕಾಂಡೋಮ್ ಬಳಸದೆ, ಗರ್ಭಧಾರಣೆಯಾಗದ ಹಾಗೆ ಮಿಲನ ಸುಖ ಅನುಭವಿಸಲು ಒಂದು ಮಾರ್ಗವಿದೆ.
ಸಾಮಾನ್ಯವಾಗಿ ಗರ್ಭಧಾರಣೆ ಎನ್ನುವುದು ಸ್ತ್ರೀಯರ ಋತುಚಕ್ರದ ಮೇಲೆ ಅವಲಂಬಿಸಿರುತ್ತದೆ. ಅಂದರೆ ಸ್ತ್ರೀಯರಿಗೆ 1ನೇ ತಾರೀಖು ಮುಟ್ಟಾದರೆ ಅವಳಲ್ಲಿ12ರಿಂದ 16ನೇ ತಾರೀಖಿನೊಳಗೆ ಅಂಡಾಣು ಬಿಡುಗಡೆಯಾಗುತ್ತದೆ. ಈ ಸಮಯದಲ್ಲಿ ಮಿಲನ ಕ್ರಿಯೆ ನಡೆಸಿದರೆ ಗರ್ಭಧರಿಸುವ ಸಂಭವವಿರುತ್ತದೆ. ಆದ್ದರಿಂದ ದಂಪತಿಗಳು ಈ ಸಮಯದಲ್ಲಿ ದೂರವಿರಬೇಕು. ಅಲ್ಲದೆ ಸ್ತ್ರೀಯರ ಅಂಡಾಣು ಬಿಡುಗಡೆಯಾದ 2-3 ದಿನಗಳು ಸಜೀವವಾಗಿರುತ್ತದೆ, ಪುರುಷರ ವಿರ್ಯಾಣು 1 ದಿನ ಮಾತ್ರ ಸಜೀವವಾಗಿರುತ್ತದೆ.
ಆದ್ದರಿಂದ ಮುಟ್ಟಾದ 20ನೇ ತಾರೀಖಿನವರೆಗೆ ಮಿಲನ ಕ್ರಿಯೆ ನಡೆಸಬಾರದು. ಒಟ್ಟಿನಲ್ಲಿ ಮುಟ್ಟಾದ 12ರಿಂದ 20ನೇ ತಾರೀಖಿನವರೆಗೆ ಮಿಲನ ಕ್ರಿಯೆ ನಡೆಸಬಾರದು.ಅನಂತರದ ದಿನದಿಂದ ಮುಟ್ಟಾಗುವವರೆಗು ದಂಪತಿಗಳು ಸೇರಬಹುದು.ಇದರಿಂದ ಗರ್ಭಧಾರಣೆ ಆಗುವುದನ್ನು ತಪ್ಪಿಸಬಹುದು.
Comments are closed.