ಆರೋಗ್ಯ

ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು…

Pinterest LinkedIn Tumblr

ಮೊದಲೆಲ್ಲಾ ಬೊಕ್ಕತಲೆ ಸಮಸ್ಯೆ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿದ್ದರೆ ಇತ್ತೀಚೆಗೆ ವಯಸ್ಸು 20 ದಾಟುತ್ತಿದ್ದಂತೆ ಕೂದಲು ಉದುರುತ್ತಿರುವುದು ಹೆಚ್ಚಿನವರನ್ನು ಚಿಂತೆಗೀಡು ಮಾಡಿದೆ.

ಕೂದಲು ಉದುರುವುದನ್ನು ದುಬಾರಿ ಚಿಕಿತ್ಸೆಗೆ ಮೊರೆ ಹೋಗುವ ಬದಲು, ಅಜ್ಜಿ ಮಾಡುತ್ತಿದ್ದ ಮನೆ ಮದ್ದುಗಳ ಮೊರೆ ಹೋಗುವುದು ಬೆಸ್ಟ್.

ಇಲ್ಲಿ ನಾವು ಕೂದಲು ಉದುರುವುದನ್ನು ಪರಿಣಾಮಕಾರಿಯಾಗಿ ತಡೆಯುವ 9 ಮನೆಮದ್ದು ನೀಡಿದ್ದೇವೆ …

ಕೂದಲು ಉದುರುವ ಸಮಸ್ಯೆಗೆ ಜೇನು ಮದ್ದು
9:1 ಪ್ರಮಾಣದಲ್ಲಿ ಜೇನು ಮತ್ತು ನೀರನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಇದು ತಲೆ ತುರಿಕೆ ಕಡಿಮೆ ಮಾಡಿ ಕೂದಲು ಉದುರುವುದನ್ನು ತಡೆಗಟ್ಟುವುದು.

ಕೂದಲು ಉದುರುವ ಸಮಸ್ಯೆಗೆ ಮೆಂತೆ ಮದ್ದು
ಮೆಂತೆ ವಾರಕ್ಕೊಮ್ಮೆ ಮೆಂತೆಯನ್ನು ಹರಿದು ಪೇಸ್ಟ್‌ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆದರೆ ಕೂದಲಿಗೆ ತುಂಬಾ ಒಳ್ಳೆಯದು.

ಕೂದಲು ಉದುರುವ ಸಮಸ್ಯೆಗೆ ಕರಿಬೇವು ಮದ್ದು
ಆಹಾರದಲ್ಲಿರುವ ಕರಿಬೇವನನ್ನು ಬಿಸಾಡಬೇಡಿ, ತಿನ್ನಿ. ತೆಂಗಿನೆಣ್ಣೆಗೆ ಕರಿಬೇವನ್ನು ಹಾಕಿ ಕುದಿಸಿ, ಆ ಎಣ್ಣೆ ತಲೆಗೆ ಹಚ್ಚುವುದು ಕೂಡ ಒಳ್ಳೆಯದು.

ಕೂದಲು ಉದುರುವ ಸಮಸ್ಯೆಗೆ ನೆಲ್ಲಿಕಾಯಿ ಮದ್ದು
ದಿನಾ ಒಂದು ನೆಲ್ಲಿಕಾಯಿ ತಿನ್ನುವುದು ಆರೋಗ್ಯಕ್ಕೂ, ಕೂದಲಿಗೂ ತುಂಬಾ ಒಳ್ಳೆಯದು.

ಕೂದಲು ಉದುರುವ ಸಮಸ್ಯೆಗೆ ಬಾದಾಮಿ ಮದ್ದು
ಪ್ರೊಟೀನ್‌ ಕೊರತೆ ಉಂಟಾದಾಗ ಕೂಡ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ದಿನಾ 5 ಬಾದಾಮಿಯನ್ನು ನೆನೆ ಹಾಕಿ ಬೆಳಗ್ಗೆ ತಿನ್ನಿ.

ಕೂದಲು ಉದುರುವ ಸಮಸ್ಯೆಗೆ ತ್ರಿಫಲ ಮದ್ದು
ಆಯುರ್ವೇದದಲ್ಲಿ ಈ ಮದ್ದನ್ನು ಬಳಸಲಾಗುವುದು. ತ್ರಿಫಲವನ್ನು(ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ). ತ್ರಿಫಲ ಪುಡಿಯನ್ನು ರಾತ್ರಿ ಒಂದು ಲೋಟ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಕೂದಲು ಉದುರುವ ಸಮಸ್ಯೆಗೆ ಪಾಲಾಕ್‌ ಮದ್ದು
ಕೂದಲು ಉದುರುವುದನ್ನು ತಡೆಯಲು ಬಾಹ್ಯ ಆರೈಕೆಯಷ್ಟೇ ಆಹಾರ ಸೇವನೆಯಲ್ಲೂ ಗಮನ ವಹಿಸಬೇಕು. ದಿನಾ ಒಂದು ಕಟ್ಟು ಪಾಲಾಕ್‌ ಬೇಯಿಸಿ ತಿನ್ನಿ. ಇದು ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ಮದ್ದು
ಈರುಳ್ಳಿ ರಸ ಕೂದಲು ಉದುರುವುದನ್ನು ತಡೆಯುವ ಬೆಸ್ಟ್ ಮನೆ ಮದ್ದಾಗಿದೆ. ಈರುಳ್ಳಿ ರಸ ಹಚ್ಚಿ, ಒಂದು ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ತಲೆಗೆ ಸುತ್ತಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ.

Comments are closed.