
ಹುಣಸೂರು: ರಾಮನ ಭಕ್ತರಷ್ಟೇ ಹನುಮ ಭಕ್ತರು ಕೂಡ ನಮ್ಮಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಹನುಮ ಜಯಂತಿ ಮಾಡಿಯೇ ತೀರುತ್ತೇವೆ ಎಂದು ಹನುಮ ಮಾಲಾಧಾರಿ ಸಂಸದ ಪ್ರತಾಪ್ ಸಿಂಹ ಘೋಷಿಸಿದ್ದಾರೆ.
ಬುಧವಾರ ಹುಣಸೂರಿನಲ್ಲಿರುವ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಹನುಮ ಮಾಲೆ ವಿಸರ್ಜಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರಿಗೆ ಯಾವಾಗ ಪಾಪಕ್ಕೆ ಪ್ರತಿಫಲ ಸಿಗಬೇಕೋ ಆವಾಗ ಸಿಗಲಿದೆ. ದುಷ್ಟ ಶಕ್ತಿಗಳನ್ನು ಶಿಕ್ಷಿಸುವ ಕೆಲಸ ದೇವರೇ ಮಾಡುತ್ತಾನೆ ಎಂದು ಹೇಳಿದರು.
ಡಿಸೆಂಬರ್ 1ರಿಂದ ಹನುಮ ಮಾಲಾಧಾರಿಯಾಗಿದ್ದ ಸಂಸದ ಪ್ರತಾಪ್ ಸಿಂಹ, ಹನುಮ ಜಯಂತಿ ಸಂದರ್ಭದಲ್ಲಿ ಬಂಧನಕ್ಕೀಡಾದ ಹಿನ್ನೆಲೆಯಲ್ಲಿ ಮಾಲೆ ವಿಸರ್ಜನೆ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಾಲೆಯನ್ನು ವಿಸರ್ಜಿಸಿದ್ದರು. ಅಲ್ಲದೇ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಸಿದರು ಎಂದು ಮಾಧ್ಯಮದ ವರದಿ ತಿಳಿಸಿದೆ,
-ಉದಯವಾಣಿ
Comments are closed.