ಕರ್ನಾಟಕ

ರವಿ ಬೆಳೆಗೆರೆ, ಅನಿಲ್ ರಾಜ್ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Pinterest LinkedIn Tumblr


ಬೆಂಗಳೂರು: ಪತ್ರಕರ್ತ ರವಿ ಬೆಳೆಗೆರೆ ಹಾಗೂ ಅನಿಲ್ ರಾಜ್ ಅವರನ್ನು ಅಂತಿಮ ಆದೇಶ ನೀಡುವವರೆಗೂ ಬಂಧಿಸಬಾರದು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ಮಧ್ಯಂತರ ಆದೇಶ ನೀಡಿದೆ.

ರವಿಬೆಳೆಗೆರೆ ಹಾಗೂ ಅನಿಲ್ ರಾಜ್ ಗೆ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಶಿಕ್ಷೆ ವಿಧಿಸಿತ್ತು. ಸಮಿತಿಯ ಆದೇಶವನ್ನು ಪ್ರಶ್ನಿಸಿ ಇಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಅಂತಿಮ ಆದೇಶ ನೀಡುವವರೆಗೂ ಇಬ್ಬರು ಪತ್ರಕರ್ತರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

-ಉದಯವಾಣಿ

Comments are closed.