
ಉಡುಪಿ: ಉಡುಪಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ವಿಭಾಗ ಪತ್ರ ಸೃಷ್ಟಿಸಿ ನಿತ್ಯಾನಂದ ಶೆಟ್ಟಿಯವರ ಸಹಿಯನ್ನು ಪೋರ್ಜರಿ ಮಾಡಿ ಮೋಸ ಮಾಡಿ ಅಪರಾಧವನ್ನು ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ದೂರುದಾರರಾದ ನಿತ್ಯಾನಂದ ಶೆಟ್ಟಿ ಹಾಗೂ ಆರೋಪಿ ಜಲಜ ಶೆಟ್ಟಿ ಅವರು ಸಂಬಂಧದದಲ್ಲಿ ತಮ್ಮ ಹಾಗೂ ಅಕ್ಕನಾಗಿದ್ದು, ಉಳಿದ ಆರೋಪಿಗಳಾದ ಸತೀಶ ಶೆಟ್ಟಿ, ಯಶೋಧ ಶೆಟ್ಟಿ, ಶಕುಂತಲಾ ಶೆಟ್ಟಿ, ನಳಿನಿ ಶೆಟ್ಟಿ ಮತ್ತು ಕುಶಲ ಶೆಟ್ಟಿ ಅವರು ಜಲಜ ಶೆಟ್ಟಿ ಅವರ ಮಕ್ಕಳಾಗಿದ್ದಾರೆ. ನಿತ್ಯಾನಂದ ಶೆಟ್ಟಿಯವರ ತಾಯಿಯ ಆಸ್ತಿಯಲ್ಲಿ ಅವರಿಗೆ ಪಾಲು ಕೊಡದೇ ಮೋಸ ಮಾಡುವ ಉದ್ದೇಶದಿಂದ 08-02-2002 ರಂದು ಪೋರ್ಜರಿ ಮಾಡಿದ್ದರು.
ಈ ಪ್ರಕರಣದ ತನಿಖೆಯನ್ನು ಆಗಿನ ಸಬ್ ಇನ್ಸ್‌ಪೆಕ್ಟರ್ ಆದ ಬಿ.ಎಸ್ ಪ್ರಕಾಶ್ ರವರು ತನಿಖೆ ನಡೆಸಿ ದೊಷಾರೋಪಣೆ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಈ ಪ್ರಕರಣದ ಸಾಕ್ಷಿ ವಿಚಾರಣೆ ನಡೆಯುತ್ತಿರುವಾಗ ಆರೋಪಿ ಜಲಜ ಶೇಟ್ಟಿಯವರು ಮೃತ ಪಟ್ಟಿರುತ್ತಾರೆ. ಈ ಪ್ರಕರಣವು ಮಾನ್ಯ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುಧ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಮಂಜುನಾಥ್ ಎಂ.ಎಸ್ ರವರು ಆರೋಪಿಗೆ ಐಪಿಸಿ ಕಲಂ 465, 467, 468, 471, ಜೊತೆಗೆ 34 ರಡಿ 3 ವರ್ಷ ಸಾದಾ ಸಜೆ ಮತ್ತು ರೂ 6000/- ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.