ಮನೋರಂಜನೆ

ಕಾಮಾಟಿಪುರದಲ್ಲಿ ಸುತ್ತಿದ ಶೋಭಿತಾ

Pinterest LinkedIn Tumblr


ನಟಿ ಹಾಗೂ ಮಾಡೆಲ್‌ ಶೋಭಿತಾ ಧೂಳಿಪಾಳ ಇದೀಗ ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ತಳವೂರಲು ಪ್ರಯತ್ನಿಸುತ್ತಿದ್ದು, ಇದೀಗ ಸೆಕ್ಸ್‌ ವರ್ಕರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹಿಂದಿ ಹಾಗೂ ಮಲಯಾಳದಲ್ಲಿ ಏಕಕಾಲಕ್ಕೆ ಸಿದ್ಧವಾಗಲಿರುವ ಈ ಚಿತ್ರದಲ್ಲಿ ನಟಿಸುತ್ತಿರುವ ಶೋಭಿತಾ, ಪಾತ್ರಕ್ಕಾಗಿ ಮುಂಬಯಿ ರೆಡ್‌ಲೈಟ್‌ ಏರಿಯಾ ಕಾಮಾಟಿಪುರದಲ್ಲಿ ಸುತ್ತಾಟ ನಡೆಸಿರುವ ಇವರು, ಅಲ್ಲಿನ ವಿಷವರ್ತುಲದಲ್ಲಿ ಸಿಕ್ಕಿಕೊಂಡಿರುವ ಕೆಲ ಹುಡುಗಿಯರನ್ನು ಮಾತನಾಡಿಸಿದ್ದಾರೆ.

ಈಗಾಗಲೇ ಹಲವು ಬಾರಿ ನಟಿಯಾಗಿ ಸೆಟ್ಲ್‌ ಆಗಲು ಟ್ರೈ ಮಾಡಿದ್ದ ಶೋಭಿತಾ ಎಲ್ಲೂ ಸದ್ದು ಮಾಡಿರಲಿಲ್ಲ. ಟಾಲಿವುಡ್‌ನಲ್ಲೂ ಅವರಿಗೆ ಆಫರ್‌ಗಳಿದ್ದರೂ ನಟಿಸಿರಲಿಲ್ಲ. ಈಗ ಗಟ್ಟಿಯಾದ ಪಾತ್ರದೊಂದಿಗೆ ಬೆಳ್ಳಿತೆರೆಯಲ್ಲಿ ಮಿಂಚಲು ಹೊರಟಿದ್ದಾರೆ.

ಏತನ್ಮಧ್ಯೆ, ಅದೇ ಏರಿಯಾದಲ್ಲಿ ಕೆಲವು ದೃಶ್ಯಗಳನ್ನು ನಿರ್ದೇಶಕರು ಶೂಟ್‌ ಮಾಡಿದ್ದಾರೆ. ಅಲ್ಲಿನ ಚಿಕ್ಕ ಚಿಕ್ಕ ಓಣಿಗಳಲ್ಲಿ ವಾಸಿಸುತ್ತಾ ಸೆಕ್ಸ್‌ ವರ್ಕರ್‌ಗಳು ಎದುರಿಸುವ ಪರಿಸ್ಥಿತಿಗಳು ಧಾರುಣವಾಗಿರುತ್ತವೆ ಎಂದು ಶೋಭಿತಾ ಹೇಳಿಕೊಂಡಿದ್ದಾರೆ.

Comments are closed.