
ಬೆಂಗಳೂರು: ಸೆಲ್ಫಿ ಗೀಳು ಈಗ ಎಲ್ಲೆಡೆ ಹೆಚ್ಚಾಗಿದೆ. ಸಿನಿತಾರೆಯರು, ಸೆಲಬ್ರೆಟಿಗಳಲ್ಲೂ ಈ ಸೆಲ್ಫಿ ಸಂಭ್ರಮ ಜೋರಾಗಿದೆ.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸೆಲ್ಫಿ ಮೊರೆ ಹೋಗಿದ್ದಾರೆ.
ಮಂಗಳವಾರ ಕೆಲವು ಯುವಕರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಸೆಲ್ಫಿ ತೆಗೆದಿದ್ದಾರೆ.
ಸಿದ್ದರಾಮಯ್ಯ ಟ್ವಿಟರ್ ಖಾತೆಯಲ್ಲಿ ಈ ಫೋಟೊವನ್ನು ಹಾಕಲಾಗಿದೆ.
ಯುವಕರ ಒತ್ತಾಯಕ್ಕೆ ಮಣಿದು ಸೆಲ್ಫಿ ತೆಗೆದ ಕ್ಷಣ ಖುಷಿಯಾಯಿತು ಎಂದು ಷರಾ ಕೂಡ ಬರೆದಿದ್ದಾರೆ.
Comments are closed.